Bangalore, ಮಾರ್ಚ್ 20 -- Bengaluru Layoffs 2025: ಬೆಂಗಳೂರಿನ ಮಾಹಿತಿ ತಂತ್ರಜ್ಞಾನ, ರೀಟೇಲ್‌ ಉದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ಕಡಿತ ಜೋರಾಗಿದೆ. ಇನ್ನೇನು ಹತ್ತು ದಿನ ಕಳೆದರೆ ಆರ್ಥಿಕ ವರ್ಷ ಮುಕ್ತಾಯವಾಗಲಿದೆ. ಬಹುತೇಕ ಹನ್ನೆರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಈವರೆಗೂ 87 ಟೆಕ್ ಕಂಪನಿಗಳು ಒಟ್ಟು 23,054 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಭಾರತದಲ್ಲೇ ಅತಿ ಹೆಚ್ಚು ವಿಭಿನ್ನ ರೀತಿಯ ಹಾಗೂ ಹೆಚ್ಚು ವೇತನ ಸಿಗಬಲ್ಲ ಉದ್ಯೋಗದಾತ ನಗರಿ ಬೆಂಗಳೂರು ಎನ್ನುವ ಹೆಸರೂ ಇದೆ. ಆದರೆ ಉದ್ಯೋಗ ಕಡಿತದ ಪ್ರಮಾಣ ಹೆಚ್ಚುತ್ತಿರುವುದು ವಿವಿಧ ಆರ್ಥಿಕ ಹಿನ್ನಡೆಗೂ ದಾರಿ ಮಾಡಿಕೊಟ್ಟಿದೆ. ಉದ್ಯೋಗ ಅರಸಿ ಬರುವವರಿಗೆ ಉಳಿಯಲು ಬೇಕಾದ ಪಿಜಿ( ಪೇಯಿಂಗ್‌ ಗೆಸ್ಟ್‌) ವ್ಯವಸ್ಥೆ ಬೆಂಗಳೂರಲ್ಲಿ ಬೆಳೆದಿದ್ದು, ಅದರ ಮೇಲೂ ಪರಿಣಾಮ ಬೀರಿದೆ. ಪಿಜಿ ಆದಾಯದಲ್ಲಿ ಏರುಪೇರು ಆಗಿರುವುದು ಆಸ್ತಿ ಮೌಲ್ಯ ಕುಸಿದು ರಿಯಲ್‌ ಎಸ್ಟೇಟ್‌ ವಹಿವಾಟು ಕೂಡ ಕೊಂಚ ಹಿನ್ನಡೆ ಅನುಭವಿಸಿ...