Bengaluru, ಏಪ್ರಿಲ್ 12 -- ಐತಿಹಾಸಿಕ 'ಬೆಂಗಳೂರು ಕರಗ' ಚೈತ್ರ ಪೂರ್ಣಿಮೆಯ ದಿನವಾದ ಇಂದು ನಡೆಯಲಿದೆ. ಇದಕ್ಕೆ ಮುನ್ನಾ ದಿನ ಶುಕ್ರವಾರ‌ ಸಂಪಂಗಿ ಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ.

ಸಂಪಂಗಿ ಕೆರೆಯ ಕರಗದ ಕುಂಟೆಯಲ್ಲಿರುವ ಶಕ್ತಿ ಪೀಠದಲ್ಲಿ ಗುರುವಾರ ರಾತ್ರಿಯಿಂದ ಹಸಿ ಕರಗದ ಪೂಜಾ ವಿಧಿಗಳು, ಧಾರ್ಮಿಕ ಆಚರಣೆಗಳು ನಡೆದವು. ಶುಕ್ರವಾರ ನಸುಕಿನಲ್ಲಿ ಹಸಿ ಕರಗ ಸಿದ್ಧವಾಯಿತು.

ಸಂಪಂಗಿ ಕೆರೆ ಶಕ್ತಿಪೀಠದಲ್ಲಿ ವಿಶೇಷ ಪೂಜೆಯ ನಂತರ, ಹೂವಿನ ವೇಷಭೂಷಣದೊಂದಿಗೆ ಸಿದ್ಧರಾದ ಅರ್ಚಕ ಎ. ಜ್ಞಾನೇಶ್‌ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು.

ಸಂಪಂಗಿ ಕೆರೆ ಶಕ್ತಿಪೀಠದಿಂದ ಹಡ್ಸನ್‌ ವೃತ್ತದತ್ತ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ನಡೆಯಿತು.

ಮೆರವಣಿಗೆಯುದ್ಧಕ್ಕೂ ನೂರಾರು ವೀರಕುಮಾರರು ಸಾಗಿದರು. ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳದಲ್ಲಿ ವೀರಕುಮ...