Bengaluru, ಮಾರ್ಚ್ 25 -- Bengaluru Karaga: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಕರಗ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ಸಿದ್ಧತೆಗಳು ಶುರುವಾಗಿವೆ. ಏಪ್ರಿಲ್ 4 ರಿಂದ ಕರಗ ಉತ್ಸವದ ಪೂಜಾ ವಿಧಿ-ವಿಧಾನಗಳು ಆರಂಭವಾಗಲಿದ್ದು, ಏಪ್ರಿಲ್ 12ರ ಶನಿವಾರ ಕರಗ ಶಕ್ತ್ಯುತ್ಸವ ನಡೆಯಲಿದೆ. ಆ ಮೂಲಕ ಪ್ರಸಿದ್ಧ ಕರಗ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಕರ್ನಾಟಕದಲ್ಲಿ ಅನುಸರಿಸಲಾಗುವ ಸಾಂಪ್ರದಾಯಿಕ ಕನ್ನಡ ಹಿಂದೂ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆಯಂದು ಕರಗ ಶಕ್ತ್ಯುತ್ಸವ ನಡೆಯುತ್ತೆ.11 ದಿನಗಳ ಈ ಉತ್ಸವವು 300 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಕರಗವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ನಗರಕ್ಕೆ ಆಗಮಿಸುತ್ತಾರೆ. ಬಿಬಿಎಂಪಿ, ನಗರ ಜಿಲ್ಲಾಡಳಿತ, ಪೊಲೀಸ್ ವಿಭಾಗ ಹಾಗೂ ಕರದ ಸಮಿತಿಯ ಪದಾಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಕರಗ ಮಹೋತ್ಸವದ ಇತಿಹಾಸ, ಮಹತ್ವ ಹಾಗೂ ಕಥೆಗಳನ್ನು ಇ...