Bidadi,Ramangara,Bengaluru,ಬೆಂಗಳೂರು,ಬಿಡದಿ,ರಾಮನಗರ, ಮಾರ್ಚ್ 12 -- ಬೆಂಗಳೂರು: ರಾಮನಗರ ಜಿಲ್ಲೆಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ 32 ಮಾನವ ತಲೆಬುರುಡೆಗಳನ್ನು ಸೋಮವಾರ ಪತ್ತೆ ಹಚ್ಚಲಾಗಿದ್ದು, ಆ ಮನೆಯ ಮಾಲೀಕ ಬಲರಾಮ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಲರಾಮ್‌ ಮನೆಗೆ ದಾಳಿ ನಡೆಸಿದ್ದರು. ಆಗ ಪತ್ತೆಯಾದ ತಲೆಬುರುಡೆಗಳಲ್ಲಿ ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ತಲೆಬುರುಡೆಗಳು ಇದ್ದವು. ಈ ತಲೆಬುರುಡೆಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ತಂಡಕ್ಕೆ ಒಪ್ಪಿಸಿದ್ದು, ಅವರು ಅದರ ಪರೀಕ್ಷೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿ ಜೋಗರದೊಡ್ಡಿ ಗ್ರಾಮದಲ್ಲಿ ತಲೆ ಬುರುಡೆ ಮತ್ತು ಕೈಕಾಲು ಮೂಳೆಗಳನ್ನು ಸಂಗ್ರಹಿಸಿಟ್ಟುಕೊಂಡು ವಾಮಾಚಾರ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ| ಬ್ಯಾಡಗಿ ಮೆಣಸಿನಕಾಯಿ ದರ ಹಠಾತ್ ಇಳ...