Bangalore, ಮಾರ್ಚ್ 19 -- Bengaluru Chennai Expressway: ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈ ನಗರಕ್ಕೆ ಸಂಪರ್ಕಕಲ್ಪಿಸುವ 'ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆʼ ಈ ವರ್ಷ ಲೋಕಾರ್ಪಣೆಗೊಳ್ಳುವುದಿಲ್ಲ. ಈಗಿನ ನಿರೀಕ್ಷೆಯಂತೆ ಜೂನ್‌ 2026 ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆರಂಭದಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವರ್ಷದ ಆಗಸ್ಟ್‌ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ನೀಡಿತ್ತು. ನಿಮಾಣ ವಿಳಂಬವಾಗುತ್ತಿದ್ದು ಆದರೆ ಈ ಗಡುವು ಮುಂದಿನ ವರ್ಷಕ್ಕೆ ಹೋಗಿದೆ. 262 ಕಿಮೀ ಉದ್ದದ ಈ ಎಕ್ಸ್‌ ಪ್ರೆಸ್‌ ವೇ ನ 71 ಕಿಮೀ ಸಂಚಾರಕ್ಕೆ ಸಿದ್ದವಾಗಿದ್ದು ಉಳಿದ ಮಾರ್ಗದ ನಿರ್ಮಾಣ ಸಾಗುತ್ತಿದೆ. ಕರ್ನಾಟಕದ ವ್ಯಾಪ್ತಿಗೆ ಒಳಪಡುವ 71 ಕಿಲೋಮೀಟರ್‌ ಸಂಪೂರ್ಣ ಕಾರ್ಯ ಮುಕ್ತಾಯವಾಗಿದ್ದು ಕಳೆದ ವರ್ಷವೇ ಅನೌಪಚಾರಿಕವಾಗಿ ಸಂಚಾರಕ್ಕೆ ತೆರೆಯಲಾಗಿದೆ. ಹೊಸಕೋಟೆಯ ಇಂಟರ್ ಚೇಂಜ್‌ನಿಂದ ಆರಂಭವಾಗುವ 280 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ವೇ ಇದಾಗಿದ್ದು, ಸದ್ಯ ಹೊಸಕೋಟೆ ಸ್...