Bengaluru, ಫೆಬ್ರವರಿ 22 -- ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನವು ಪಟ್ಟಣಗಳಲ್ಲದೆ ಹಳ್ಳಿಗಳಲ್ಲೂ ಹವಾನಿಯಂತ್ರಣಗಳು ಅಂದರೆ ಎಸಿ ಪ್ರತಿ ಮನೆಗೂ ಹೆಚ್ಚು ಕಡಿಮೆ ಅತೀ ಅಗತ್ಯವೆಂಬಂತಾಗಿದೆ. ಈ ಸಂದರ್ಭದಲ್ಲಿ ಅನುಕೂಲವಿರುವವರು ಮನೆಗೆ, ಆಫೀಸ್‌ಗೆ ಎಸಿ ಹಾಕಿಸುತ್ತಾರೆ. ಇದರಿಂದ ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡಿ ತಂಪಾಗಿರಬಹುದು ನಿಜ, ಆದರೆ, ಅಷ್ಟೇ ಅಲ್ಲದೆ, ಇನ್ನೂ ಹಲವು ರೀತಿಯ ಪ್ರಯೋಜನಗಳಿವೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆ ದಾಖಲಾಗುತ್ತಿದೆ. ಅಲ್ಲದೆ, ಬಿಸಿಲಿನ ಪ್ರಮಾಣವೂ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹೆಚ್ಚು ಎಂದು ಹವಾಮಾನ ಇಲಾಖೆಯ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಬಹಳಷ್ಟು ಜನರು ಬೇಸಿಗೆಯನ್ನು ಹೊಡೆದೋಡಿಸಲು, ಎಸಿ, ಕೂಲರ್ ಮತ್ತು ಫ್ಯಾನ್ ಮೊರೆ ಹೋಗಿದ್ದಾರೆ. ಬೇಸಿಗೆಯಲ್ಲಿ ಎಸಿಯಿಂದಾಗುವ ಪ್ರಯೋಜನಗಳು ಏನೇನು? ಈ ಮಾಹಿತಿಯನ್ನು ಓದಿ.

ಬೇಸಿಗೆಯಲ್ಲಿ ಎಸಿಯ ಪ್ರಯೋಜನಗಳು ಎಂದರೆ ಹಲವು ರೀತಿಯ ಪ್ರಯೋಜನಗಳನ್ನು ನಾವು ನೋಡಬಹುದು. ಮನೆಯನ್ನು, ಕೋಣೆಯನ್ನು ತಂಪ...