Mysuru, ಏಪ್ರಿಲ್ 11 -- BEML New Vehicle: ಭಾರತದಲ್ಲಿ ಬೃಹತ್‌ ಕಾಮಗಾರಿಗಳಿಗೆ ಈಗ ಬಗೆಬಗೆಯ ವಾಹನ ರೂಪದ ಯಂತ್ರೋಪಕರಣಗಳುಂಟು. ಈಗಾಗಲೇ ಜೆಸಿಬಿಯಂತಹ ಯಂತ್ರೋಪಕರಣಗಳನ್ನು ನೀವು ನೋಡಿರಬಹುದು. ಇವುಗಳೊಂದಿಗೆ ಹೊಸ ಸೇರ್ಪಡೆಗೊಂಡಿದೆ ನೂತನ ವಾಹನ. ಅದು ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌( ಬಿಇಎಂಎಲ್‌)ನ ಮೈಸೂರಿನ ಘಟಕವು ರೂಪಿಸಿರುವ ವಿಭಿನ್ನ ಯಂತ್ರೋಪಕರಣ. ಭಾರತದ ಗಣಿಗಾರಿಕೆ ವಲಯವನ್ನು ಬಲಪಡಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್‌ ಲಿಮಿಟೆಡ್ ದೇಶೀಯವಾಗಿ ವಿನ್ಯಾಸಗೊಳಿಸಲಾದ ಮೋಟಾರ್ ಗ್ರೇಡರ್ ಬಿಜಿ 1205 ಅನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಕಳೆದ ಒಂದು ದಶಕದಿಂದ ಭಾರತದಲ್ಲಿ ಚರ್ಚೆಯಲ್ಲಿರುವ ಭಾರತ ಸರ್ಕಾರದ ಆತ್ಮನಿರ್ಭರ ಯೋಜನೆಗೆ ಪೂರಕವಾಗಿಯೇ ಈ ವಾಹನವನ್ನು ರೂಪಿಸಿ ಬಳಕೆಗೆ ಒದಗಿಸಲಾಗುತ್ತಿದೆ.

ಭಾರತದ ಪ್ರಮುಖ ಗಣಿಗಾರಿಕೆ ಮತ್ತು ನಿರ್ಮಾಣ ಸಲಕರಣೆ ತಯಾರಕರಲ್ಲಿ ಬೆಮೆಲ್‌ ಸಂಸ್ಥೆಯು ಕಾಲಕಾಲಕ್ಕೆ ಹೊಸ ಹೊಸ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಬೆಮೆಲ್‌ನ ಪ್ರಮುಖ ಉತ್ಪಾದನಾ ಘಟಕಗಳಲ್ಲಿ ಒಂದಾದ ಮೈಸ...