Belur, ಏಪ್ರಿಲ್ 10 -- ಹಾಸನ ಜಿಲ್ಲೆಯ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ದೇವರ ರಥೋತ್ಸವ ಸಂಭ್ರಮ, ಸಡಗರದಿಂದ ಗುರುವಾರ ಬೆಳಿಗ್ಗೆ ನೆರವೇರಿತು.

ಬೆಳಿಗ್ಗೆ ದೇಗುಲದ ಪ್ರಾಕಾರದ ಒಳಗೆ ಹಾಗೂ ಸುತ್ತಲಿನ ಬೀದಿ ಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂತ್ರಘೋಷಗಳ ನಡುವೆ ಜರುಗಿತು.

ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಬೇಲೂರಿನಲ್ಲಿ ನಡೆದ ರಥೋತ್ಸವದಲ್ಲಿ ಭಾಗಿಯಾದರು.

ಚನ್ನಕೇಶವ ರಥೋತ್ಸವದಲ್ಲಿ ಭಾಗಿಯಾದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ರಥೋತ್ಸವಕ್ಕೂ ಮೊದಲು ಶ್ರೀ ಚನ್ನಕೇಶವ ಉತ್ಸವ ಮೂರ್ತಿಯನ್ನು ಭಕ್ತಿ ಭಾವದೊಂದಿಗೆ ತರಲಾಯಿತು.

ಹಾಸನ ಜಿಲ್ಲಾಡಳಿತ,. ಮುಜರಾಯಿ ಇಲಾಖೆ ಹಾಗೂ ದೇವಸ್ಥಾನ ಸಮಿತಿಯಿಂದ ರಥೋತ್ಸವವನ್ನು ಅಚ್ಚುಕಟ್ಟಾಗಿ ರೂಪಿಸಲಾಗಿತ್ತು. ಭಾರೀ ಭದ್ರತೆ ನಡುವೆಯೇ ರಥವನ್ನು ಭಕ್ತರು ಎಳೆದರು,

ಬುಧವಾರ ಮಧ್ಯರಾತ್ರಿ ದೇವಸ್ಥಾನದ ಸುತ್ತ ಬೀದಿಗಳಲ್ಲಿ ಗರುಡೋತ್ಸವ ಸಾಗಿ ಬಂತು. ಸ್ಥಳೀಯ ಭಕ್ತರು ದೊಡ್ಡ ದೊಡ್ಡ ಪುಷ್ಪ ಮಾಲೆ/ ಹಾರಗಳನ್ನು ಸಮರ್ಪಿಸಿದರು.

Published by...