ಭಾರತ, ಮಾರ್ಚ್ 31 -- Belthangady Accident: ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ದಿ| ಅಣ್ಣಿ ಆಚಾರ್ಯ ಮತ್ತು ಶ್ರೀಮತಿ ವಿನೋದ ಆಚಾರ್ಯ ದಂಪತಿ ಪುತ್ರ,ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ಅಂಡಿಂಜೆ (೪೦ವ) ರವರು ಮಾರ್ಚ್ 31ರಂದು ಇಂದು ಮುಂಜಾನೆ 4 ಗಂಟೆಗೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವು ರಸ್ತೆಯಲ್ಲಿ ಸಂಭವಿಸಿದ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ ೪ ಗಂಟೆಗೆ ಸತೀಶ್ ಆಚಾರ್ಯ ಅವರು ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅಂಡಿಂಜೆ ಸಮೀಪದ ಕಿಲಾರ ಮಾರುಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ ನಡೆದಿದೆ.
ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.