Belagavi, ಮಾರ್ಚ್ 1 -- ಬೆಳಗಾವಿ: ಕರ್ನಾಟಕದ ನಾನಾ ಭಾಗಗಳಲ್ಲಿ ಬೇಸಿಗೆ ವೇಳೆ ಉತ್ಸವಗಳು ಜೋರಾಗಿವೆ. ಇದೇ ವಾರ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರನ್ನ ಉತ್ಸವ ವಿಜೃಂಭಣೆಯಿಂದ ನಡೆಯಿತು. ವಿಶ್ವದ ಪ್ರಮುಖ ಪಾರಂಪರಿಕ ತಾಣವಾಗಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲೂ ಉತ್ಸವ ಶುರುವಾಗಿದೆ. ಇದರ ಜತೆಯಲ್ಲಿಯೇ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲೂ ಬೆಳವಡಿ ಮಲ್ಲಮ್ಮನ ಉತ್ಸವವೂ ಆಯೋಜನೆಗೊಂಡಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಉತ್ಸವವು ಹಲವರನ್ನು ಆಕರ್ಷಿಸಿತು. ಅಲ್ಲದೇ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ರಾಯಚೂರು ಜಿಲ್ಲೆಯವರಾದ ಕವಿತಾ ಮಿಶ್ರ ಅವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿಯನ್ನು ಉತ್ಸವದಲ್ಲಿ ಪ್ರದಾನ ಮಾಡಲಾಗಿದೆ.

ಪ್ರತಿ ವರ್ಷ ಆಚರಿಸುತ್ತಿರುವ ಬೆಳವಡಿ ಉತ್ಸವದ ಕಾರ್ಯಕ್ರಮ ಆಯೋಜನೆಗೆ ಬೆಳವಡಿಯಲ್ಲಿ ಜಿಲ್ಲಾಡಳಿತದಿಂದ ಸ್ಥಳ ನಿಗದಿಯಾಗಬೇಕು. ಮಹಿಳೆಯರು ಸಾಧನೆಯ ಮೂಲಕ ಬೆಳವಡಿ ಮಲ್ಲಮ್ಮ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಹಾಕಬೇಕು. ಬೆಳವಡಿ ಮಲ್ಲ...