Belagavi, ಮಾರ್ಚ್ 3 -- ಬೆಳಗಾವಿ:ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಿ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆ ಮತ್ತು ಇತರ ಆರೋಪಿಗಳನ್ನು ಜಿಲ್ಲೆಯ ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಎಂಬುವವರು ಬಂಧಿತ ಆರೋಪಿ. ಫೆ.14ರಂದು ಉದ್ಯಮಿ ಬಸವರಾಜ್ ಅಂಬಿ ಎಂಬುವರನ್ನು ಕಿಡ್ನ್ಯಾಪ್ ಮಾಡಿದ್ದ ಮಂಜುಳಾ ಹಾಗೂ ಗ್ಯಾಂಗ್ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಾಯಿ ಬಿಡಿಸಿದಾಗ ಆರೋಪಿಗಳು ಅಪರಾಧದ ಕಿಂಗ್ ಪಿನ್ ಮಂಜುಳಾ ಹೆಸರು ಹೇಳಿದ್ದರು. ಕಿಂಗ್ ಪಿನ್ ಮಂಜುಳಾ ಕಾಂಗ್ರೆಸ್ ಕಾರ್ಯಕರ್ತೆ, ತಾನು ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ಇದೀಗ ಮಂಜುಳಾ ಎಂಬಾಕೆಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಉತ್ತರ ವಲಯ ಐಜಿಪಿ ಚೇತನ್‌ಸಿಂಗ್‌ ರಾಥೋರ್‌ ತಿಳಿಸಿದ್ದಾರೆ.

ಸಚಿವ ...