Belagavi, ಫೆಬ್ರವರಿ 15 -- ಬೆಳಗಾವಿ: ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾದಿಂದಲೂ ಸಹಸ್ರಾರು ಭಕ್ತರನ್ನು ಸೆಳಯುವ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದ ಪ್ರಗತಿಗೆ ಈಗ ಕಾಲ ಕೂಡಿ ಬಂದಿದೆ. ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಸೌಲಭ್ಯ ನೀಡಬೇಕು ಎನ್ನುವ ಬೇಡಿಕೆ ಹಳೆಯದ್ದು. ಇಲ್ಲಿ ನಿತ್ಯ ದಾಸೋಹ ಆರಂಭಿಸಬೇಕು. ಶುಚಿತ್ವಕ್ಕೆ ಒತ್ತು ಕೊಡಬೇಕು. ಮೂಲಸೌಕರ್ಯಗಳನ್ನು ಉತ್ತಮಪಡಿಸಬೇಕು ಎನ್ನುವ ಒತ್ತಾಯಗಳಿವೆ. ಕರ್ನಾಟಕ ಸರ್ಕಾರ ವರ್ಷದ ಹಿಂದೆ ಇಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಇದರಿಂದ ಇಲ್ಲಿ ಅಭಿವೃದ್ದಿಯ ಬೇಡಿಕೆಗಳಿಗೆ ಬಲ ಬಂದಿದೆ. ತಿರುಪತಿ ಹಾಗೂ ಧರ್ಮಸ್ಥಳ ಮಾದರಿಯಲ್ಲಿಯೇ ಅಭಿವೃದ್ದಿ ನೀಲ ನಕ್ಷೆಯನ್ನು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೂ ರೂಪಿಸುತ್ತಿದೆ.

ಮೊದಲ ಬಾರಿಗೆ ಮಂಡಳಿ ಹಾಗೂ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗಾಗಿ ಮಜ್ಜಿಗೆ...