Belagavi, ಫೆಬ್ರವರಿ 25 -- ಬೆಳಗಾವಿ: ಮೂರು ದಿನದ ಹಿಂದೆ ಬಸ್‌ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಸಂಘರ್ಷಕ್ಕೆ ತಿರುಗಿ ಈಗ ಅದು ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಭಾಷಾ ಸಂಘರ್ಷದ ಸ್ವರೂಪ ಪಡೆದಿದೆ. ಇದರ ನಡುವೆ ಕಂಡಕ್ಟರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಅವರ ವಿರುದ್ದ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಬಾಲಕಿಯ ಪೋಷಕರು ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಕಂಡಕ್ಟರ್‌ ಅವರಿಂದ ನಮ್ಮ ಮಗಳ ದೌರ್ಜನ್ಯ ಆಗಿರುವುದು ನಿಜ. ಆದರೆ ಈ ಘಟನೆ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಂಬಂಧವನ್ನು ಹಾಳು ಮಾಡಿ ಅನಾಹುತಗಳು ಆಗುವುದನ್ನು ತಪ್ಪಿಸಲು ಪ್ರಕರಣ ವಾಪಸ್‌ ಪಡೆಯಲು ತೀರ್ಮಾನಿಸಿದ್ದೇವೆ. ನಮಗೆ ನ್ಯಾಯ ಕೊಡಿಸಬೇಕು ಎಂದು ಬಾಲಕಿಯರ ಪೋಷಕರು ಮನವಿ ಮಾಡಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ವಿವಾದ ಸ್ವರೂಪ ಬದಲಾಗುತ್ತಿರುವ ಬೆನ್ನಲ್ಲೇ ಶಿವಸೇನೆ ಹಾಗೂ ಎಂಇಎಸ್‌ನಿಂದ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ. ಬಸ್‌ಗಳನ್ನು ತಡೆದು ಅಡ್ಡಿಪಡಿಸುತ್ತಿರ...