Belagavi, ಮಾರ್ಚ್ 5 -- Belagavi News: ಮಹಿಳೆಯೊಬ್ಬರು ಕೌಟುಂಬಿಕ ಕಿರುಕುಳದಿಂದ ಬೇಸತ್ತು ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗು ಸೇರಿ ತನ್ನ ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಚಿಂಚಳಿ ಸಮೀಪದಲ್ಲಿ ಬುಧವಾರ ದುರ್ಘಟನ ಸಂಭವಿಸಿದೆ. ಕೃಷ್ಣಾ ನದಿಗೆ ಮೂವರು ಮಕ್ಕಳೊಂದಿಗೆ ಮಹಿಳೆ ಹಾರಿದ್ದು, ಇದನ್ನು ಗಮನಿಸಿದ ಸ್ಥಳೀಯರ ಕೂಡಲೇ ರಕ್ಷಣೆಗೆ ಧಾವಿಸಿದರು. ರಕ್ಷಣಾ ಪಡೆಗಳು ಕೂಡ ಆಗಮಿಸಿದರು. ಅಷ್ಟರಲ್ಲೇ ಮೂವರು ಜೀವ ಬಿಟ್ಟಿದ್ದವಾದರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದು ಮಗುವನ್ನು ಆಸ್ಪತ್ರೆಗೆ ಸೇರಿಸಿದರೂ ಆಕೆ ಅಲ್ಲಿ ಕೊನೆಯುಸಿರೆಳೆದಳು ಎಂದು ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಚಿಂಚಲಿ ಪಟ್ಟಣದ ನಿವಾಸಿಯಾಗಿರುವ ಅಶೋಕ್‌ ಎಂಬಾತನ ಪತ್ನಿ ಶಾರದಾ(32), ಮಕ್ಕಳಾದ ಅಮೃತಾ(14), ಆ...