Bengaluru, ಜನವರಿ 26 -- ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವ ಸಲುವಾಗಿ ಆಹಾರಗಳನ್ನು ಹುಡುಕುವುದು, ವ್ಯಾಯಾಮ ಮತ್ತು ಚಟುವಟಿಕೆಗಳನ್ನು ಮಾಡುವುದು ಎಲ್ಲಡೆ ಕಂಡುಬರುವ ವಿಷಯವಾಗಿದೆ. ತೂಕದ ಬಗ್ಗೆ ತಲೆಕೆಡಿಸಿಕೊಳ್ಳುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಿನಂತೆ ಅವರಿಗೆ ಕಾಣುತ್ತದೆ. ಅದಕ್ಕಾಗಿ ಅವರು ತೂಕ ನಷ್ಟಕ್ಕೆ ಸಹಾಯ ಮಾಡುವ ಆಹಾರಗಳನ್ನು ಹುಡುಕುತ್ತಿರುತ್ತಾರೆ. ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಆಹಾರಗಳಲ್ಲಿ ಬೀಟ್ರೂಟ್‌ ಸಹ ಒಂದು. ನೆಲದಡಿಯಲ್ಲಿ ಬೆಳೆಯುವ ಈ ಗಡ್ಡೆ ಹೆಚ್ಚುವರಿ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಬೀಟ್ರೂಟ್‌ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಇದು ಫೈಬರ್‌ನಿಂದ ಸಮೃದ್ಧವಾದ ಆಹಾರವಾದ್ದರಿಂದ ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳಲು ಉತ್ತಮವಾಗಿದೆ.

ತೂಕ ಇಳಿಕೆಗೆ ಬೀಟ್ರೂಟ್‌ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಹೆಚ್ಚಿನ ಫೈಬರ್‌ ಅಂಶಗಳು ಕಡುಬಯಕೆಗಳನ್ನು ತಡೆ...