Bengaluru, ಏಪ್ರಿಲ್ 19 -- Beauty Tips: ಹೆಂಗಳೆಯರು ತಮ್ಮ ತ್ವಚೆ, ತಲೆಗೂದಲು ಆರೈಕೆಯಲ್ಲಿ ಯಾವಾಗಲೂ ಮುಂದು. ಅದರಲ್ಲೂ ಹುಬ್ಬುಗಳಿಗೆ ಸುಂದರವಾಗಿ ಶೇಪ್ ಕೊಡಲು ಬ್ಯೂಟಿ ಪಾರ್ಲರ್ ನತ್ತ ದೌಡಾಯಿಸುತ್ತಾರೆ. ಸುಂದರವಾದ ಹುಬ್ಬುಗಳು ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೀವು ಬ್ಯೂಟಿ ಪಾರ್ಲರ್ ನತ್ತ ಹೋಗಿ ಬಂದ ಕೆಲವೇ ದಿನಗಳಲ್ಲಿ ಮತ್ತೆ ಹುಬ್ಬು ಕೂದಲುಗಳು ಚಿಗುರುತ್ತವೆ. ಅದನ್ನು ತೆಗೆಯಲು ಮತ್ತೆ ಬ್ಯೂಟಿ ಪಾರ್ಲರ್‌ಗೆ ಹೋಗಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಮಯವೂ ವ್ಯರ್ಥ, ಹಣವೂ ಪೋಲು.

ನೀವು ಬ್ಯೂಟಿ ಪಾರ್ಲರ್‌ಗೇ ಹೋಗಿ ಹುಬ್ಬುಗಳಿಗೆ ಶೇಪ್ ಕೊಡಬೇಕೆಂದಿಲ್ಲ. ಮನೆಯಲ್ಲೇ ಕೆಲವು ಟಿಪ್ಸ್ ಪಾಲಿಸಿದ್ರೆ, ನೀವೇ ಸ್ವತಃ ಹುಬ್ಬುಗಳಿಗೆ ಶೇಪ್ ಕೊಡಬಹುದು. ಯಾವುದೇ ಟ್ರಿಮ್ಮರ್, ಶೇವಿಂಗ್ ಬ್ಲೇಡ್ ಬಳಸದೇ ಇದನ್ನು ಮಾಡಬಹುದು. ಕೆಲವರು ಶೇವಿಂಗ್ ಬ್ಲೇಡ್ ಬಳಸಿ ಹುಬ್ಬನ್ನೇ ಕತ್ತರಿಸಿಕೊಂಡು ಎಡವಟ್ಟು ಮಾಡಿಕೊಂಡಿರುವವರಿದ್ದಾರೆ. ನಾಜೂಕಾಗಿ ಮನೆಯಲ್ಲಿಯೇ ಸ್ವತಃ ನಿಮ್ಮ ಕೈಯಾರೆ ಹುಬ್ಬುಗಳಿಗೆ ಹೇಗೆ ಶೇಪ್ ಕೊಡಬಹು...