ಭಾರತ, ಫೆಬ್ರವರಿ 10 -- ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು, ಸೂರ್ಯನ ಕಿರಣಗಳಿಂದ ದೂರವಿರಬೇಕು ಅಥವಾ ವಿವಿಧ ಬಗೆಯ ಕ್ರೀಮ್‌ಗಳನ್ನು ಬಳಸಬೇಕು ಅಂತಿಲ್ಲ, ನೀವು ಸಂತೋಷವಾಗಿದ್ದರೆ ಅಷ್ಟೇ ಸಾಕು ಎನ್ನುತ್ತಾರೆ ತಜ್ಞರು. ಹೌದು, ಹಲವು ರೀತಿಯ ಚರ್ಮದ ಸಮಸ್ಯೆಗಳು ಧೂಳು, ಕೊಳಕು ಮತ್ತು ಯುವಿ ಕಿರಣಗಳಂತಹ ಬಾಹ್ಯ ಅಂಶಗಳಿಗಿಂತ ಹೆಚ್ಚಾಗಿ ಮಾನಸಿಕ ಒತ್ತಡದಿಂದ ಉಂಟಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸೌಂದರ್ಯದ ವಿಷಯಕ್ಕೆ ಬಂದಾಗ ಒತ್ತಡವು ಇವುಗಳಲ್ಲಿ ಎಲ್ಲದ್ದಕ್ಕಿಂತ ಹೆಚ್ಚು ಅಪಾಯಕಾರಿ ಅಂಶವಾಗಿದೆ. ಒತ್ತಡವು ಸೌಂದರ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಒತ್ತಡದಿಂದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ನೋಡಿ.

ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ನಿಮ್ಮ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಆಶ್ಚರ್ಯ ಎಂದರೆ ಭಾರತದಲ್ಲಿ ಸುಮಾರು ಶೇ 77ರಷ್ಟು ಜನರು ಒತ್ತಡದ ಲಕ್ಷಣಗಳನ್ನು ಅನುಭವಿಸುತ್ತಾರೆ. ಸೌಂದರ್ಯ ಮತ್ತು ಆರೋಗ್ಯದ ಮೇಲೆ ಅದರ ಪ್ರಭಾವವು ಗಾಢವಾಗಿದೆ ಎಂದು ಅಧ್ಯಯನಗ...