ಭಾರತ, ಫೆಬ್ರವರಿ 27 -- ಚರ್ಮದ ಅಂದ ಸದಾ ಕಾಂತಿಯಿಂದ ಹೊಳೆಯುತ್ತಿರಬೇಕು, ಮುಖದಲ್ಲಿ ಯಾವುದೇ ಕಲೆಗಳು ಇರಬಾರದು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಆದರೆ ಇಂದಿನ ಒತ್ತಡದ ಯುಗದಲ್ಲಿ ಚರ್ಮದ ಆರೈಕೆ ನಿಜಕ್ಕೂ ಸವಾಲು. ಹಾಗಂತ ಇದು ಅಸಾಧ್ಯವೇನಲ್ಲ. ಮನೆಯಲ್ಲೂ ಬೆಳೆಯುವ ಈ ಒಂದೇ ಒಂದು ಹೂ ನಿಮ್ಮ ಮುಖದ ಅಂದವನ್ನು ದುಪ್ಪಟ್ಟು ಮಾಡುತ್ತೆ. ಅದುವೇ ದಾಸವಾಳದ ಹೂ.

ದಾಸವಾಳದ ಹೂವುಗಳಿಂದ ತಯಾರಿಸಿದ ಫೇಸ್‌ಪ್ಯಾಕ್ ಹಚ್ಚುವುದರಿಂದ ಚರ್ಮವು ನೈಸರ್ಗಿಕವಾಗಿ ಮೃದುವಾಗುತ್ತದೆ ಮತ್ತು ಕಾಂತಿಯುತವಾಗುತ್ತದೆ. ಈ ಹೂವುಗಳಿಂದ ಮಾಡಿದ ಫೇಸ್‌ಪ್ಯಾಕ್‌ಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹೊರಗೆ ಲಭ್ಯವಿರುವ ರಾಸಾಯನಿಕಯುಕ್ತ ಫೇಸ್‌ಪ್ಯಾಕ್‌ಗಳಿಗೆ ಹೋಲಿಸಿದರೆ ಇದು ನೈಸರ್ಗಿಕ ಹೊಳಪನ್ನು ನೀಡುತ್ತವೆ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಬಾಹ್ಯ ಉತ್ಪನ್ನಗಳನ್ನು ಬಳಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಫೇಸ್‌ಪ್ಯಾಕ್‌ಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿರುವುದರಿಂದ ಯಾವುದೇ ಅಡ್ಡಪರಿಣಾಮಗ...