Bengaluru, ಮಾರ್ಚ್ 26 -- ಬೇಸಿಗೆಯ ಬಿಸಿಲಿನ ಪ್ರಖರ ಹೆಚ್ಚುತ್ತಿದ್ದು, ಪ್ರತಿದಿನ ತಾಪಮಾನವು ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನೀರಿನಂಶವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ದಿನವಿಡೀ ನೀರು ಕುಡಿಯಲು ಇಷ್ಟಪಡದಿದ್ದರೆ ಹಣ್ಣಿನ ರಸವನ್ನು ಕುಡಿಯುವುದು ಸಹ ನೀರಿನಂಶವನ್ನು ಕಾಯ್ದುಕೊಳ್ಳಲು ಆರೋಗ್ಯಕರ ಮಾರ್ಗವಾಗಿದೆ. ಆದರೆ, ರೆಡಿಮೇಡ್ ಜ್ಯೂಸ್‌ಗಳನ್ನು ಕುಡಿಯುವುದು ಒಳ್ಳೆಯದಲ್ಲ. ಅವು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ. ಮನೆಯಲ್ಲಿಯೇ ಹಣ್ಣಿನಿಂದ ತಯಾರಿಸಬಹುದಾದ ಜ್ಯೂಸ್‌ಗಳನ್ನು ಕುಡಿಯುವುದು ಉತ್ತಮ. ಯಾವೆಲ್ಲಾ ಹಣ್ಣು-ತರಕಾರಿಗಳ ರಸಗಳನ್ನು ಕುಡಿಯಬಹುದು, ಅದರ ಆರೋಗ್ಯ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದಾಳಿಂಬೆ ರಸ: ದಾಳಿಂಬೆ ರಸವು ಜನಪ್ರಿಯ ಪಾನೀಯವಾಗಿದೆ. ದಾಳಿಂಬೆ ಪ್ಯೂನಿಕಾ ಗ್ರಾನಟಮ್ ಮರದ ಹಣ್ಣು. ಈ ಹಣ್ಣು ಕಹಿಯಾಗಿರುವುದರಿಂದ ಬೀಜಗಳನ್ನು ಮಾತ್ರ ತಿನ್ನಲಾಗುತ್ತದೆ. ಒಂದು ದಾಳಿಂಬೆಯಲ್ಲಿ ಸುಮಾರು 30 ಮಿಲಿಗ್ರಾಂ (ಮಿಗ್ರಾಂ) ವಿಟಮಿ...