Bangalore, ಮಾರ್ಚ್ 17 -- BBMP Tax Collection: ಬೃಹತ್‌ ಬೆಂಗಳೂರು ನಗರ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಇನ್ನೇನು ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್‌ ಮುಗಿಲು ಎರಡು ವಾರವೂ ಇಲ್ಲ. ಈಗಾಗಲೇ ಬಿಬಿಎಂಪಿ ತೆರಿಗೆ ವಿಭಾಗವು ಗುರಿಯನ್ನು ತಲುಪಲು ಪ್ರಯತ್ನಿಸಿದೆ. ಈವರೆಗೂ 4,604 ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಲಾಗಿದೆ. ಈ ವರ್ಷದ ಗುರಿ 5,210 ಕೋಟಿ ರೂ.ಗಳನ್ನು ನೀಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳ ಪ್ರಕಾರವೇ ಆಸ್ತಿ ತೆರಿಗೆ ಸಂಗ್ರಹದಲ್ಲಿ ಈವರೆಗೂ ಶೇ. 88ರಷ್ಟು ಗುರಿಯನ್ನು ತಲುಪಲಾಗಿದೆ. ಕೆಲವು ವಲಯಗಳಲ್ಲಂತೂ ಶೇ. ನೂರರಷ್ಟು ಸಾಧನೆಯನ್ನೂ ಮಾಡಲಾಗಿದೆ. ಇನ್ನೂ ಹದಿನಾಲ್ಕು ಇರುವುದರಿಂದ ಇನ್ನಷ್ಟು ಆಸ್ತಿ ತೆರಿಗೆ ಸಂಗ್ರಹವಾಗುವ ಗುರಿ ಹೊಂದಲಾಗಿದೆ. 2025-26ನೇ ಸಾಲಿಗೆ ಬಿಬಿಎಂಪಿಯು 5,600 ಕೋಟಿ ರೂ. ಆಸ್ತಿ ತೆರಿಗೆ ಗುರಿ ಹೊಂದಿದೆ.

2024-25ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟ...