Bengaluru, ಮಾರ್ಚ್ 27 -- Bazooka Trailer: ಮಲಯಾಳಂ ಸ್ಟಾರ್‌ ನಟ ಮಮ್ಮೂಟಿ ಅಭಿನಯದ ಬಜೂಕಾ ಚಿತ್ರದ ಟ್ರೇಲರ್ ಬುಧವಾರ (ಮಾರ್ಚ್ 26) ಬಿಡುಗಡೆಯಾಗಿದೆ. ಮೋಹನ್‌ಲಾಲ್ ಅಭಿನಯದ 'ತುಡರುಮ್', ನಸ್ಲೆನ್ ಅಭಿನಯದ 'ಆಲಪ್ಪುಝ ಜಿಂಖಾನಾ' ಚಿತ್ರಗಳ ಟ್ರೇಲರ್‌ಗಳ ಬಳಿಕ, ಮಮ್ಮೂಟಿ ಅಭಿನಯದ ಬಜೂಕಾ ಟ್ರೇಲರ್‌ ಕೂಡ ಪ್ರೇಕ್ಷಕರ ಮುಂದೆ ಬಂದಿದೆ. ಡೀನೋ ಡೆನ್ನಿಸ್ ನಿರ್ದೇಶನದ ಬಜೂಕಾ ಚಿತ್ರವು ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾಸ್‌ ಆಕ್ಷನ್‌ ಜಾನರ್‌ ಈ ಸಿನಿಮಾದಲ್ಲಿ ಮಮ್ಮೂಟಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಗೇಮ್ ಥ್ರಿಲ್ಲರ್ ಚಿತ್ರದಲ್ಲಿ ಮಮ್ಮೂಟಿ ಅವರಿಗೆ ವಿನೋದ್ ಮೆನನ್ ಎಂಬ ಪಾತ್ರವಿದೆ. ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನದೇ ಆದ ತಂಡಕಟ್ಟಿಕೊಂಡು, ರೌಡಿಗಳ ಹೆಡೆಮುರಿಕಟ್ಟುವ ಕೊಚ್ಚಿ ನಗರದ ಎಸಿಪಿ ಬೆಂಜಮಿನ್ ಜೋಶುವಾ ಪಾತ್ರದಲ್ಲಿ ಗೌತಮ್ ನಟಿಸಿದ್ದಾರೆ.‌ ಬಳಿಕ ಮಮ್ಮೂಟಿ ಪಾತ್ರ ಪರಿಚಯವಾಗುತ್ತದೆ. ಅವರು ಮಿಸ್ಟರ್ ನ...