ಭಾರತ, ಏಪ್ರಿಲ್ 10 -- Bazooka audience review: ಮಲಯಾಳಂ ಸಿನಿಮಾಗಳೆಂದರೆ ಈಗ ಜನರಲ್ಲಿ ಸಾಕಷ್ಟು ನಿರೀಕ್ಷೆಯಿದೆ. ವಿಶೇಷವಾಗಿ ಮಮ್ಮುಟ್ಟಿ ನಟಿಸಿದ ಸಿನಿಮಾಗಳ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇರುತ್ತದೆ. ಮಮ್ಮುಟ್ಟಿ ನಟಿಸಿರುವ ಬಜೂಕಾ ಸಿನಿಮಾವು ‌ಇಂದು (ಏಪ್ರಿಲ್‌ 10) ಬಿಡುಗಡೆಯಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಬಾಸಿಲ್ ಜೋಸೆಫ್ ಅವರ ಹಾಸ್ಯ ಚಿತ್ರ 'ಮಾರಣಮಸ್' ಮತ್ತು ನಸ್ಲೆನ್ ಕೆ ಗಫೂರ್ ಅವರ ಹಾಸ್ಯ ಕ್ರೀಡಾ ನಾಟಕ 'ಆಲಪ್ಪುಳ ಜಿಮ್ಖಾನಾ' ಜತೆಯಲ್ಲಿಯೇ ಬಿಡುಗಡೆಯಾಗಿದೆ. ಮಲಯಾಳಂ ಬಾಕ್ಸ್‌ ಆಫೀಸ್‌ನಲ್ಲಿ ಹೀಗೆ ಪ್ರಮುಖ ಸಿನಿಮಾಗಳ ಪೈಪೋಟಿ ನಡುವೆ ಆರಂಭಿಕ ಲೆಕ್ಕಾಚಾರದ ಪ್ರಕಾರ ಬಜೂಕಾ ಗಳಿಕೆ ಸಾಧಾರಣವಾಗಿದೆ. ಇಂದು ಮಧ್ಯಾಹ್ನ 1:50 ಗಂಟೆಯವರೆಗೆ ದೇಶೀಯ ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ 93 ಲಕ್ಷ ರೂಪಾಯಿ ಗಳಿಸಿತ್ತು. ಈ ಚಿತ್ರದ ಕುರಿತು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಬಜೂಕಾ ಕ್ಲೈಮ್ಯಾಕ್ಸ್‌ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ.

ಬಜೂಕಾ ಸಿನಿಮಾ ನೋಡಿ ಬಂದ ಜನರು ಸೋ...