ಭಾರತ, ಫೆಬ್ರವರಿ 9 -- ಅಡುಗೆಮನೆಯಲ್ಲಿ ಬಳಸುವ ಸಾಕಷ್ಟು ಪದಾರ್ಥಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತವೆ. ಅಂತಹ ಪದಾರ್ಥಗಳಲ್ಲಿ ಬಿರಿಯಾನಿ ಎಲೆ ಅಥವಾ ದಾಲ್ಚಿನ್ನಿ ಎಲೆ ಕೂಡ ಒಂದು. ಇದನ್ನು ಅಡುಗೆಯ ಘಮಕ್ಕಾಗಿ ಮಾತ್ರ ಬಳಸುತ್ತಾರೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇದನ್ನು ಅಡುಗೆಯಲ್ಲಿ ಸೇರಿಸುವುದು ಮಾತ್ರವಲ್ಲ, ನೀರಿನಲ್ಲಿ ಕುದಿಸಿ ಕುಡಿಯುವುದರಿಂದಲೂ ಹಲವು ಪ್ರಯೋಜನಗಳಿವೆ. ಈ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಮಾತ್ರವಲ್ಲದೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವೂ ಸಮೃದ್ಧವಾಗಿದೆ. ಹಾಗಾದರೆ ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ.

ಬಿರಿಯಾನಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಈ ಬಿರಿಯಾನಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಪದೇ ಪದೇ ಜಂಕ್‌ ಫುಡ್ ತಿನ್ಬೇಕು ಅನ್ನಿಸೋದು, ನೋಡಿದಾಗ ...