ಭಾರತ, ಫೆಬ್ರವರಿ 20 -- ನಾವು ಪ್ರತಿದಿನ ಸ್ನಾನ ಮಾಡುತ್ತೇವೆ. ಸ್ನಾನ ಮಾಡುವುದರಿಂದ ಕೇವಲ ಚರ್ಮ, ದೇಹ ಶುದ್ಧವಾಗುವುದಷ್ಟೇ ಅಲ್ಲ. ನಕಾರಾತ್ಮ ಶಕ್ತಿ ದೂರಾಗಿ, ಸಕಾರಾತ್ಮಕ ಶಕ್ತಿಯೂ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಮೆದುಳು ಕೂಡ ಸಕ್ರಿಯವಾಗಿರುತ್ತದೆ. ಆದರೆ ಸ್ನಾನ ಮಾಡುವಾಗ ಅಥವಾ ಸ್ನಾನದ ನಂತರ ಕೆಲವು ತಪ್ಪುಗಳನ್ನು ಮಾಡಬಾರದು. ಈ 4 ತಪ್ಪುಗಳನ್ನು ಮಾಡುವುದರಿಂದ ದುರಾದೃಷ್ಟ ಮತ್ತು ಕೆಟ್ಟ ದೃಷ್ಟಿ ನಮ್ಮನ್ನು ಹಿಂಬಾಲಿಸಬಹುದು. ಈ ಅಭ್ಯಾಸಗಳನ್ನು ತಪ್ಪಿಸದಿದ್ದರೆ, ರಾಹು ಮತ್ತು ಕೇತುವಿನ ಪ್ರಭಾವದಿಂದಾಗಿ ದುರಾದೃಷ್ಟ ನಮ್ಮನ್ನು ಹಿಂಬಾಲಿಸುವ ಸಾಧ್ಯತೆ ಇದೆ.

ವಾಸ್ತು ಪ್ರಕಾರ, ಸ್ನಾನ ಮಾಡುವಾಗ ಚಪ್ಪಲಿ ಧರಿಸಬಾರದು. ಎಂತಹ ಜಾಗದಲ್ಲಿ ಸ್ಥಾನ ಮಾಡುತ್ತಿದ್ದರೂ ಚಪ್ಪಲಿಯನ್ನು ಕಳಚಿಯೇ ಸ್ನಾನ ಮಾಡಬೇಕು. ಸ್ನಾನ ಮಾಡುವಾಗ ಚಪ್ಪಲಿ ಧರಿಸುವುದನ್ನು ಅಶುಭವೆಂದು ಪರಿಗಣಿಸಲಾಗಲಿದೆ. ಇದರಿಂದ ನಕಾರಾತ್ಮಕ ಶಕ್ತಿ ನಮ್ಮನ್ನು ಹಿಂಬಾಲಿಸುತ್ತದೆ.

ಸ್ನಾನ ಮಾಡುವಾಗ ನೀರಿನ ಜೊತೆ ಸೋಪಿನ ಕಲ್ಮಶವೂ ಸೇರುತ್ತದೆ. ಆ ನೀರನ್ನು ಸ್...