ಭಾರತ, ಏಪ್ರಿಲ್ 29 -- ಜಗಜ್ಯೋತಿ ಬಸವ ಜಯಂತಿ ಪ್ರಯುಕ್ತ ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಈ ಬಾರಿಯ "ಮಾನವತಾವಾದಿ ಬಸವೇಶ್ವರ ಪ್ರಶಸ್ತಿ"ಯನ್ನು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಅವರ ಧರ್ಮ ಪತ್ನಿಯಾದ ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರಿಗೆ ಗದಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮಸ್ವಾಮೀಜಿ, ಸಚಿವರಾದ ಎಚ್‌ಕೆ ಪಾಟೀಲ್‌, ಮಾಜಿ ಸಚಿವ ಎಸ್‌ಎಸ್‌ ಪಾಟೀಲ್‌, ಡಿ.ಆರ್.ಪಾಟೀಲ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಸವಜಯಂತಿ ಅಂಗವಾಗಿ ಗದುಗಿನ ತೋಂಟದಾರ್ಯ ಮಠ ವಿಶ್ವ ಮಾನವತಾವಾದಿ ಬಸವಣ್ಣ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಕೃಷ್ಣಬೈರೇಗೌಡ ಹಾಗೂ ಮೀನಾಕ್ಷಿ ದಂಪತಿಯನ್ನು ಆಯ್ಕೆ ಮಾಡಲಾಗಿದೆ.

ಕೃಷ್ಣಬೈರೇಗೌಡ ಅವರು ಅವರ ತಂದೆ ಬೈರೇಗೌಡ ಅವರು ತೀರಿಕೊಂಡ ನಂತರ ಕೋಲಾರದ ವೇಮಗಲ್‌ನಿಂದ ಶಾಸಕರಾಗಿ ನಂತರ ಬೆಂಗಳೂರಿನ ಬ್ಯಾಟರಾಯನಪುರ ಶಾಸಕರ...