ಭಾರತ, ಮಾರ್ಚ್ 8 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈವೋಲ್ಟೇಜ್ ಪಂದ್ಯವೆಂದರೆ ಅದು ಭಾರತ vs ಪಾಕಿಸ್ತಾನ! ಫೆಬ್ರವರಿ 23ರಂದು ಈ ಮ್ಯಾಚ್ ದುಬೈನಲ್ಲಿ ನಡೆದಿತ್ತು. ಇದೀಗ ಈ ಬದ್ಧವೈರಿಗಳ ಕದನವು ಟೆವಿಲಿಷನ್ ಇತಿಹಾಸದಲ್ಲಿ ನೂತನ ಚರಿತ್ರೆ ಸೃಷ್ಟಿಸಿದೆ. ದಾಖಲೆಗಳ ಪುಟದಲ್ಲಿ ತನ್ನದೇ ಆದ ನೂತನ ಪುಟವನ್ನು ತೆರದಿರುವ ಈ ಪಂದ್ಯವು ವೀಕ್ಷಣೆಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಅಂದರೆ ಬ್ಲಾಕ್​ಬಸ್ಟರ್​ ಪಂದ್ಯವನ್ನು ವೀಕ್ಷಿಸಿರುವ ಟೆಲಿವಿಷನ್ ವೀಕ್ಷಕರ ಸಂಖ್ಯೆ ಬರೋಬ್ಬರಿ 20.6 ಕೋಟಿ! ಇದು ಅಚ್ಚರಿ ಎನಿಸಿದರೂ ನೀವು ನಂಬಲೇಬೇಕು.

2023ರ ಏಕದಿನ ವಿಶ್ವಕಪ್​ ಹೊರತುಪಡಿಸಿ ಬಾರ್ಕ್​ (BARC) ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಎರಡನೇ ಪಂದ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. 2023ರ ವಿಶ್ವಕಪ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಹೋಲಿಸಿದರೆ ಶೇ 10 ಹೆಚ್ಚು ರೇಟಿಂಗ್ ಈ ಸಲದ ಪಂದ್ಯಕ್ಕೆ ಸಿಕ್ಕಿರುವು ವಿಶೇಷ. ಆ ಮೂಲಕ ಭಾರತ vs ಪಾಕಿಸ್ತಾನ ಮ್ಯಾಚ್ ಹೊಸ ದಾಖಲೆ ನಿರ್ಮಿಸಿದೆ. ಸಾಂಪ್ರದಾಯಿಕ...