Bantwal, ಮಾರ್ಚ್ 8 -- ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ಸೇರಿದ ಸಾವಿರಾರು ಭಕ್ತರ ಸಮ್ಮುಖ ವೈಭವದಿಂದ ನಡೆಯಿತು

ಇದು ದೇವಳದಲ್ಲಿ ನಡೆಯುವ 201ನೇ ಬ್ರಹ್ಮರಥೋತ್ಸವ. ರಥಾರೋಹಣ ಸಂದರ್ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಹರಕೆ ಒಪ್ಪಿಸಿದರು.

ಕ್ರೋಧಿ ನಾಮ ಸಂವತ್ಸರದ ಫಾಲ್ಗುಣ ಶುದ್ಧ ತದಿಗೆ ಮಾ.2ರ ಭಾನುವಾರದಿಂದ ಫಾಲ್ಗುಣ ಶುದ್ಧ ಅಷ್ಟಮಿ ಶುಕ್ರವಾರದವರೆಗೆ ಕಾರ್ಯಕ್ರಮಗಳು ನಡೆದವು. ಇದಕ್ಕಾಗಿ ದೇಗುಲ ವಿಶೇಷವಾಗಿ ಆಲಂಕಾರಗೊಂಡಿತ್ತು.

.2ರಂದು ಧ್ವಜಾರೋಹಣ , ಬೆಳ್ಳಿ ಪಾಲ್ಕಿ ಹಗಲೋತ್ಸವ, ಗರುಡೋತ್ಸವ, 3ರಂದು ಬೆಳ್ಳಿ ಪಾಲ್ಕಿ ಹಗಲೋತ್ಸವ , ಹನುಮಂತೋತ್ಸವ, 4ರಂದು ಬೆಳ್ಳಿ ಲಾಲ್ಕಿ ಹಗಲೋತ್ಸವ, ಚಂದ್ರಮಂಡಲ ಉತ್ಸವ ನಡೆದವು.

ಮಾ.5ರಂದು ಶ್ರೀ ದೇವರ ಮೂಲ ಪ್ರತಿಷ್ಠಾ ವರ್ದಂತಿ, ಪಟ್ಟದ ದೇವರಿಗೆ ಸ್ವರ್ಣ ಪೀಠ ಸಮರ್ಪಣೆ, ಬೆಳ್ಳಿ ಪಾಲ್ಕಿ ಹಗಲೋತ್ಸವ,ಜಲ ಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವ, ನಡೆಯಿತು. 6ರಂದು ಬ್ರಹ್ಮರಥೋತ್...