ಭಾರತ, ಏಪ್ರಿಲ್ 14 -- ಅಳಿಸುವುದು ಸುಲಭ, ಆದರೆ ನಗಿಸುವುದು ಬಹಳ ಕಷ್ಟ ಎಂಬ ಮಾತಿದೆ. ಆದರೆ ತಮ್ಮ ವಿಭಿನ್ನ ಹಾಸ್ಯಪಾತ್ರಗಳು ಹಾಗೂ ಸಂಭಾಷಣೆಯ ಮೂಲಕವೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ನಟ ಬ್ಯಾಂಕ್ ಜನಾರ್ಧನ್‌. ತರ್ಲೆ ನನ್ ಮಗ, ಶ್ ಮುಂತಾದ ಸಿನಿಮಾಗಳಲ್ಲಿನ ಇವರ ಪಾತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿವೆ. ಕನ್ನಡದ ಪ್ರಸಿದ್ಧ ಹಾಸ್ಯನಟರ ಸಾಲಿನಲ್ಲಿ ಬ್ಯಾಂಕ್ ಜನಾರ್ಧನ್‌ ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ. ದೊಡ್ಡಣ್ಣ ಟೆನ್ನಿಸ್‌ಕೃಷ್ಣರಂತಹ ಆ ಕಾಲದ ಹಾಸ್ಯನಟರಿಂದ ಹಿಡಿದು ಸಾಧುಕೋಕಿಲ, ಬುಲೆಟ್ ಪ್ರಕಾಶ್ ಅವರ ಜೊತೆಗೂ ತೆರೆ ಹಂಚಿಕೊಂಡು ಕನ್ನಡಿಗರ ಮೊಗದಲ್ಲಿ ನಗು ಅರಳಿಸಿರುವ ಧೀಮಂತ ಇವರು. ಕಿರುತೆರೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡವರು.

ಹೆಸರು ಜನಾರ್ಧನ್‌ ಆದರೆ ಇವರು ಬ್ಯಾಂಕ್ ಜನಾರ್ಧನ್‌ ಎಂದೇ ಖ್ಯಾತಿ ಗಳಿಸಿದವರು. 1949ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸುತ್ತಾರೆ ಜನಾರ್ಧನ್‌. ರಂಗಭೂಮಿಯ ಮೂಲಕ ನಟನೆ ಆರಂಭಿಸುವ ಇವರು ಹಾಸ್ಯಪಾತ್ರಗಳ ಮೂಲಕವೇ ಕನ್ನಡಿಗರಿಗೆ ಹೆ...