ಭಾರತ, ಜನವರಿ 30 -- Bank Holidays in February 2025: ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳು, ರಾಷ್ಟ್ರೀಯ ರಜಾ ದಿನಗಳ ಕಾರಣದಿಂದ ವಾರಾಂತ್ಯ ಹೊರತುಪಡಿಸಿ ಎಂಟು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್ ಪ್ರಕಾರ ಫೆಬ್ರವರಿ 3, 11, 12, 15, 19, 20, 26 ಮತ್ತು 28 ರಂದು ಬ್ಯಾಂಕ್‌ಗಳಿಗೆ ರಜೆ ಘೋಷಿಸಿದೆ. ಕೆಲವೊಂದು ರಜೆಗಳು ಎಲ್ಲಾ ರಾಜ್ಯಗಳಿಗೆ ಅನ್ವಯವಾಗದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್ ಎನ್ನುವುದು ಚೆಕ್ ಮತ್ತು ಪ್ರಾಮಿಸರಿ ನೋಟ್‌ಗಳ ವಿತರಣೆಗೆ ಸಂಬಂಧಿಸಿದೆ. ರಜಾದಿನಗಳಲ್ಲಿ ಇವುಗಳನ್ನು ಒಳಗೊಂಡ ವಹಿವಾಟುಗಳು ಲಭ್ಯವಿರುವುದಿಲ್ಲ.

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗೆ ಭೇಟಿ ನೀಡುವಂತಹ ಅವಶ್ಯಕತೆ ಇದ್ದರೆ ಬ್ಯಾಂಕ್‌ ರಜಾ ದಿನಗಳ ಪಟ್ಟಿ ಇಲ್ಲಿದೆ. ಭಾರತದಾದ್ಯಂತ ಪ್ರದೇಶದಿಂದ ಪ್ರದೇಶಕ್ಕೆ ರಜಾದಿನಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಂ...