ಭಾರತ, ಫೆಬ್ರವರಿ 24 -- ಬೆಂಗಳೂರು : ಹಣಕಾಸು ವರ್ಷದ ಕೊನೆಯ ತಿಂಗಳು ಮಾರ್ಚ್ ಸಮೀಪಿಸುತ್ತಿದೆ. ಮಾರ್ಚ್ ತಿಂಗಳಲ್ಲಿ ಭಾರತದಾದ್ಯಂತ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಕೆಲವು ರಾಷ್ಟ್ರೀಯ ರಜಾದಿನಗಳ ಜೊತೆಗೆ, ಕೆಲವು ರಾಜ್ಯ ಆಧಾರಿತ ರಜೆಗಳೂ ಇವೆ. ಹೀಗಾಗಿ ತಿಂಗಳಲ್ಲಿ ಕೆಲವು ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಹೀಗಾಗಿ ಬ್ಯಾಂಕ್‌ ರಜೆಯನ್ನು ಗಮನಿಸಿಕೊಂಡು ನಿಮ್ಮ ಹಣಕಾಸು ಯೋಜನೆಯನ್ನು ಮಾಡುವುದು ಒಳಿತು. ಇದೇ ವೇಳೆ ರಜಾ ದಿನಗಳಿಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುವವರು, ಅಥವಾ ಪ್ರವಾಸ ಹೊರಡುವವರು ರಜಾದಿನವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬಹುದು.

ಮಾರ್ಚ್‌ ತಿಂಗಳಲ್ಲಿ ನಿಮ್ಮ ಪ್ರಯಾಣ ಯೋಜನೆಯನ್ನು ಮಾಡಿಕೊಳ್ಳಲು ಹಾಗೂ ಬ್ಯಾಂಕ್‌ ವಹಿವಾಟುಗಳನ್ನು ಪ್ಲಾನ್‌ ಮಾಡಿಕೊಳ್ಳಲು, ರಜಾದಿನಗಳ ಕ್ಯಾಲೆಂಡರ್ ಅನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಉತ್ತಮ. ಭಾರತದಲ್ಲಿ ಮುಖ್ಯವಾಗಿ ರಾಷ್ಟ್ರೀಯ ರಜಾದಿನಗಳಿವೆ. ಇವು ಸಾರ್ವಜನಿಕ ರಜಾದಿನಗಳಾಗಿದ್ದು, ದೇಶದ ಎಲ್ಲಾ ರಾಜ್ಯಗಳಿಗೆ ಅ...