ಭಾರತ, ಏಪ್ರಿಲ್ 12 -- ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ಆ ಕಾರಣ ಬ್ಯಾಂಕ್ ಹಾಗೂ ಇನ್ನಿತರ ಸರಕಾರಿ ಸಂಸ್ಥೆಗಳಿಗೆ ರಜೆ ಇರುತ್ತದಾ? ಇಲ್ಲವಾ? ಎಂಬ ಪ್ರಶ್ನೆ ಎದುರಾಗಿದೆ. ಇದೇ ಮೊದಲ ವರ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ರಜೆ ನೀಡುತ್ತಿರುವ ಕಾರಣ ಸಾಕಷ್ಟು ಜನರು ಈ ಬಗ್ಗೆ ಅನುಮಾನ ಹೊಂದಿದ್ದಾರೆ. ನಿಮ್ಮ ಅನುಮಾನಕ್ಕೆ ನಾವಿಲ್ಲಿ ಉತ್ತರ ನೀಡಿದ್ದೇವೆ ಗಮನಿಸಿ.

ಭಾರತೀಯ ರಿಸರ್ವ್ ಬ್ಯಾಂಕಿನ ವಾರ್ಷಿಕ ರಜಾ ಕ್ಯಾಲೆಂಡರ್‌ನಲ್ಲಿ ಹೆಚ್ಚಿನ ರಾಜ್ಯಗಳಿಗೆ ಈ ದಿನವನ್ನು ರಜಾದಿನವೆಂದು ಪಟ್ಟಿ ಮಾಡಲಾಗಿದೆ. ಯಾವ ರಾಜ್ಯಗಳಲ್ಲಿ ರಜೆ ನೀಡಲಾಗಿದೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಏಪ್ರಿಲ್ 14, 2025 ರಂದು ಅನೇಕ ರಾಜ್ಯಗಳಲ್ಲಿನ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ. ಜೊತೆಗೆ ವಿಷು (ಕೇರಳ), ಬಿಹು (ಅಸ್ಸಾಂ) ನಂತಹ ಹಲವಾರು ಪ್...