ಭಾರತ, ಫೆಬ್ರವರಿ 27 -- ಮಾರ್ವಾಡಿ ಶೈಲಿಯ ಆ್ಯಂಟಿಕ್‌ ಚಿನ್ನದ ಬಳೆಗಳುಮದುವೆ ಸೀಸನ್ ಆರಂಭವಾಗಿದೆ. ಈ ಸಮಯದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚು. ಉಡುಗೊರೆ ರೂಪದಲ್ಲೂ ಚಿನ್ನಾಭರಣಗಳನ್ನು ನೀಡುವ ಪದ್ಧತಿ ಇದೆ. ಈಗ ಆ್ಯಂಟಿಕ್ ಶೈಲಿಯ ಆಭರಣಗಳು ಟ್ರೆಂಡ್ ಆಗಿವೆ. ಅದರಲ್ಲೂ ರಾಜಸ್ಥಾನಿ ಮಾರ್ವಾಡಿ ಶೈಲಿಯ ಡಿಸೈನ್‌ಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆ. ರಾಜಸ್ಥಾನಿ ಕಡಗಳು ವಿಶಿಷ್ಠ ಹಾಗೂ ವಿಭಿನ್ನ ಶೈಲಿಯನ್ನು ಹೊಂದಿವೆ. ಇವು ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲ, ವೆಸ್ಟರ್ನ್ ಉಡುಪಿನೊಂದಿಗೂ ಹೊಂದಿಕೆಯಾಗುತ್ತವೆ. ನೀವು ಚಿನ್ನದ ಬಳೆ ಖರೀದಿಸಬೇಕು ಎಂದುಕೊಂಡು ಡಿಸೈನ್‌ಗಾಗಿ ನೋಡುತ್ತಿದ್ದರೆ ಇಲ್ಲೊಮ್ಮೆ ಗಮನಿಸಿ. ಈ 7 ಬಳೆ ಡಿಸೈನ್‌ಗಳು ನಿಮಗೆ ಇಷ್ಟವಾಗದೇ ಇರದು.

ರಾಯಲ್ ರಾಜಸ್ಥಾನಿ ಗೋಲ್ಡ್ ಕಡರಾಜಸ್ಥಾನಿ ಮಹಿಳೆಯರಲ್ಲಿ ಇದೇ ರೀತಿಯ ವಿನ್ಯಾಸಗಳನ್ನು ಹೊಂದಿರುವ ಚಿನ್ನದ ಬಳೆಗಳನ್ನು ನೀವು ಕಾಣಬಹುದು. ಇದು ಸಾಂಪ್ರದಾಯಿಕ ರಾಜಸ್ಥಾನಿ ಚಿನ್ನದ ಆಭರಣ ವಿನ್ಯಾಸವಾಗಿದೆ. ಇದು ನೋಟದಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಇದು...