Bengaluru, ಮಾರ್ಚ್ 21 -- ಈ ಬಳೆ ವಿನ್ಯಾಸಗಳು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ: ಭಾರತೀಯ ಮಹಿಳೆಯರು ತಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಸುಂದರವಾದ ಬಳೆಗಳನ್ನು ಧರಿಸುತ್ತಾರೆ. ಚೂಡಿದಾರ್, ಸೀರೆಗಳು ಮತ್ತು ಲೆಹೆಂಗಾಗಳಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವಾಗ ಅಂದನೆಯ ಬಳೆಗಳನ್ನು ತೊಡುವುದರಿಂದ ಮತ್ತಷ್ಟು ಆಕರ್ಷಕವಾಗಿ ಕಾಣಿಸುವಿರಿ. ಬಳೆಗಳ ಟ್ರೆಂಡ್‌ಗಳು ಸಹ ಬದಲಾಗುತ್ತಲೇ ಇರುತ್ತವೆ. ಇಷ್ಟೇ ಅಲ್ಲ, ಗಾಜಿನ ಬಳೆಗಳನ್ನು ಮಿಶ್ರಣ ಮಾಡಿ ಹೊಂದಿಸುವ ಮೂಲಕ ಸುಂದರವಾದ ವಿನ್ಯಾಸಗಳಿರುವ ಬಳೆಗಳನ್ನು ತೊಡಬಹುದು. ಇಲ್ಲಿ ಕೆಲವು ಸುಂದರವಾದ ಬಳೆಗಳು ಮತ್ತು ಸುಂದರವಾದ ಮಿಕ್ಸ್ ಅಂಡ್ ಮ್ಯಾಚ್ ಮಾದರಿಗಳನ್ನು ತರಲಾಗಿದೆ. ಅದನ್ನು ನೀವು ಪ್ರಯತ್ನಿಸಬಹುದು. ಇವು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ.

ನಿಮ್ಮ ಬಳಿ ದಪ್ಪನೆಯ ಚಿನ್ನದ ಬಣ್ಣದ ಬಳೆಗಳಿದ್ದರೆ ಅದರೊಂದಿಗೆ ಈ ರೀತಿಯ ಗುಲಾಬಿ ವಿನ್ಯಾಸದ ಬಳೆಗಳು ತುಂಬಾ ಸುಂದರವಾಗಿ ಕಾಣುತ್ತವೆ. ನಿಮ್ಮ ಯಾವುದೇ ಬಣ್ಣದ ಬಳೆಗಳೊಂದಿಗೆ ಬೆರೆಸಿ ಮ್ಯಾಚ್ ಮಾಡು...