ಭಾರತ, ಫೆಬ್ರವರಿ 25 -- ಭಾರತೀಯ ಮಹಿಳೆಯರ ಅಲಂಕಾರಗಳಲ್ಲಿ ಬಳೆಗಳು ಸಹ ಸೇರಿವೆ. ಹೆಚ್ಚಿನ ವಿವಾಹಿತ ಮಹಿಳೆಯರು ಕೈಯಲ್ಲಿ ಬಳೆಗಳನ್ನು ಧರಿಸುತ್ತಾರೆ. ವಿಶೇಷವಾಗಿ ವಿಶೇಷ ಸಂದರ್ಭದಲ್ಲಿ ಭಾರತೀಯ ಉಡುಪನ್ನು ಧರಿಸಿದ್ದರೆ,ಬಳೆಗಳಿಲ್ಲದೆ ನಿಮ್ಮ ಉಡುಗೆ ಅಪೂರ್ಣವಾಗಿ ಕಾಣುತ್ತದೆ. ಯಾವುದೇ ಹಬ್ಬವಾಗಲಿ ಅಥವಾ ಮದುವೆ ಸಂದರ್ಭವಾಗಲಿ,ಕೈಯಲ್ಲಿ ಹೊಸ ಬಳೆಗಳನ್ನು ಧರಿಸುವುದು ಖಚಿತ. ಇಲ್ಲಿ ಕೆಲವು ಇತ್ತೀಚಿನ ಬಳೆಗಳ ವಿನ್ಯಾಸಗಳನ್ನು ಇಲ್ಲಿ ತೋರಿಸಲಾಗಿದೆ. ಇವುಗಳನ್ನು ಕೈಗಳಿಗೆ ಧರಿಸಿದಾಗ ತುಂಬಾ ಸುಂದರವಾಗಿ ಕಾಣುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿವೆ. ಇಲ್ಲಿವೆ ಬಳೆ ಡಿಸೈನ್‌ಗಳು.

ಬಹುವರ್ಣದ ಬಳೆಗಳು:ನಿಮ್ಮ ಸಂಗ್ರಹದಲ್ಲಿ ಬಹುವರ್ಣದ ಬಳೆಗಳು ಇರಲೇಬೇಕು. ನೀವು ಇವುಗಳನ್ನು ಯಾವುದೇ ಬಣ್ಣದ ಉಡುಪಿಗೂ ಮ್ಯಾಚ್ ಮಾಡಿಕೊಳ್ಳಬಹುದು. ಸ್ವಲ್ಪ ಸ್ಟೈಲಿಶ್ ಲುಕ್‌ಗಾಗಿ,ನೀವು ಇಂತಹ ಬಳೆಗಳನ್ನು ಆಯ್ಕೆ ಮಾಡಬಹುದು.

ಗಾಜಿನ ಬಳೆಗಳು:ಗಾಜಿನ ಬಳೆಗಳು ಯಾವಾಗಲೂ ಟ್ರೆಂಡ್‌ನಲ್ಲಿ ಇರುತ್ತವೆ. ಇವು ಸಾಂಪ್ರದಾಯಿಕ ನೋಟದ ಜ...