Bangalore, ಜನವರಿ 30 -- ಬೆಂಗಳೂರು: ಭವಿಷ್ಯದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಹಲವಾರು ಮಾರ್ಗಗಳನ್ನು ಕರ್ನಾಟಕ ಸರ್ಕಾರ ಕಂಡುಕೊಳ್ಳುತ್ತಲೇ ಇದೆ. ಕಾವೇರಿ ನದಿ ನೀರು ಬಳಕೆಯ ಪ್ರಮಾಣ ಹೆಚ್ಚಿಸುತ್ತಿರುವ ನಡುವೆ ಸಮೀಪದಲ್ಲಿ ಲಭ್ಯ ಇರುವ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಅದನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ಶುರುವಾಗಿವೆ. ಏಕೆಂದರೆ ಈಗಾಗಲೇ ಬೆಂಗಳೂರು ಜನಸಂಖ್ಯೆ ಎರಡು ಕೋಟಿಗೆ ಸಮೀಪಿಸಿದ್ದು ಮುಂದಿನ ಒಂದು ದಶಕದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. ಈ ಕಾರಣದಿಂದಲೇ ಬೆಂಗಳೂರು ಕೇಂದ್ರಿತ ನೀರಿನ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀರನ್ನು ಸಂಸ್ಕರಿಸಿ ಬೆಂಗಳೂರಿಗೆ ನೀಡುವ ಯೋಜನೆಯೂ ಇದರಲ್ಲಿ ಸೇರಿದೆ. ಮೊದಲ ಹಂತದಲ್ಲಿ 583 ಎಂಎಲ್‌ಡಿ ಸಂಸ್ಕರಿತ ನೀರನ್ನು ಕೊಡಲು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ನೀರಿನ ವಿಚಾರದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಪ್ರಸ್...