Bangalore, ಮಾರ್ಚ್ 11 -- Bangalore Rains: ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ಬಿಸಿಲ ಬೇಗೆಯಿಂದ ಬಸವಳದಿದ್ದ ಜನರಿಗೆ ನಿರಾಳತೆ ತಂದಿತು. ಮೂರ್ನಾಲ್ಕು ದಿನದ ಹಿಂದೆ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಬೆಂಗಳೂರು, ಮೈಸೂರು ಸಹಿತ ದಕ್ಷಿಣ ಕರ್ನಾಟಕದಲ್ಲಿ ಸೋಮವಾದಿಂದ ಮೂರು ದಿನ ಮಳೆಯಾಗಬಹುದು ಎನ್ನುವ ಮುನ್ಸೂಚನೆ ನೀಡಿದ್ದರು. ಅದರಂತೆಯೇ ಸೋಮವಾರ ಮಧ್ಯಾಹ್ನದ ನಂತರವೇ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ಅಲ್ಲಲ್ಲಿ ಮಳೆಯಾಯಿತು.ಕೆಲವರು ಕೆಲಸ ಮುಗಿಸಿ ಮನೆಗೆ ಬರುವಾಗ ಮಳೆಯಲ್ಲಿ ತೋಯ್ದರು. ಸಂಜೆ ಹೊತ್ತಿನಲ್ಲಿ ಹಲವರು ಕಾಫಿಯೊಂದಿಗೆ ಮಳೆ ಸವಿದರು. ಆ ಮೂಲಕ ಒಂದೂವರೆ ತಿಂಗಳಿನಿಂದ ಬಿಸಿಲ ಬೇಗೆ ಅನುಭವಿಸಿದ್ದವರು ಸಣ್ಣ ಮಳೆಯಿಂದ ಪುಳಕಿತರಾಗಿದ್ದು ಕಂಡು ಬಂದಿತು.

ಕರ್ನಾಟಕದಲ್ಲಿ ಶಿವರಾತ್ರಿ ಮುಗಿದು ಯುಗಾದಿ ಹೊತ್ತಿಗೆ ಒಂದೆರಡು ಮಳೆಗಳು ಬರುತ್ತವೆ...