Bangalore, ಮಾರ್ಚ್ 13 -- Bangalore Palace: ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 472 ಎಕರೆ ವಿಶಾಲವಾಗಿರುವ ಹಾಗೂ ಮೈಸೂರು ರಾಜವಂಶಸ್ಥ ಕುಟುಂಬದವರ ಸುಪರ್ದಿಯಲ್ಲಿರುವ ಬೆಂಗಳೂರಿನ ಅರಮನೆ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಉಭಯ ಸದನಗಳಲ್ಲೂ ಒಪ್ಪಿಗೆ ದೊರೆತಿದ್ದ ಬೆಂಗಳೂರು ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ1996ಗೆ ತಿದ್ದುಪಡಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ವಿಧೇಯಕಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ್ದು, ಬೆಂಗಳೂರು ಅರಮನೆ ಸುಗ್ರೀವಾಜ್ಞೆಯನ್ನು ಕರ್ನಾಟಕ ಪತ್ರದ ಮೂಲಕ ಪ್ರಕಟಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಅರಮನೆ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ವಿಸ್ತರಣೆಯೂ ಸೇರಿದಂತೆ ಸರ್ಕಾರದಿಂದ ಕೈಗೊಳ್ಳಲಾಗುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಭಿವೃದ್ದಿ ಹಕ್ಕುಗಳ ವರ್ಗಾವಣೆ( TDR) ತಡೆಯುವ ನಿಟ್ಟಿನಲ್ಲಿ ನೂತನ ವಿಧೇಯಕ ಕೆಲಸ ಮಾಡಲಿದೆ. ಬೆಂಗಳೂರು ಅರಮನೆ ಸ್ವಾಧೀನದ ವಿಚಾರ ಇನ್ನು ಸುಪ್ರೀಂ ಕೋರ್ಟ್‌ ತಡೆಯಾಜ್...