Bangalore, ಫೆಬ್ರವರಿ 8 -- ಬೆಂಗಳೂರು: ಕೆಲಸ ಕೊಟ್ಟಿದ್ದ ಮಾಲೀಕರ ಅಂಗಡಿ ಮತ್ತು ಪರಿಚಿತರ ಅಂಗಡಿಗಳ ಮಾಲೀಕರು ಮಾರಾಟಕ್ಕೆಂದು ನೀಡಿದ್ದ 8 ಕೋಟಿ ರೂ.ಗಳ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ನರೇಶ್ ಶರ್ಮಾ ಬಂಧಿತ ಆರೋಪಿ. ಈತನಿಂದ ರೂ. 5 ಲಕ್ಷ ನಗದು ಹಾಗೂ 45 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರೇಶ್ ಶರ್ಮಾ ಕೆಲಸ ಮಾಡುತ್ತಿದ್ದ ಆಭರಣ ಅಂಗಡಿ ಹಾಗೂ ಪರಿಚಿತರ ಅಂಗಡಿಗಳ ಮಾಲೀಕರು ಈತನಿಗೆ ಮಾರಾಟ ಮಾಡಲು ಆಭರಣಗಳನ್ನು ನೀಡುತ್ತಿದ್ದರು. ಹೀಗೆ ನೀಡಿದ್ದ ರೂ. 8 ಕೋಟಿ ಮೌಲ್ಯದ ಸುಮಾರು 9 ಕೆ.ಜಿ 462 ಗ್ರಾಂ. ತೂಕದ ಚಿನ್ನಾಭರಣದೊಂದಿಗೆ ಈತ ಪರಾರಿಯಾಗಿದ್ದ. ಈತನ ಅಂಗಡಿ ಮಾಲೀಕ ವಿಕ್ರಮ್ ಜ್ಯುವೆಲ್ಲರ್ಸ್ ಮಾಲೀಕ ವಿಕ್ರಮ್ ಕಾರ್ಯ ಅವರು ದೂರು ನೀಡಿದ್ದರು.

ಶರ್ಮಾ ಒಂದು ಬಾರಿ ಚಿನ್ನಾಭರಣಗಳನ್ನು ಕೊಯಮತ್ತೂರಿಗೆ ಕೊಂಡೊಯ್ದು ಮಾರಾಟ ಮಾಡಿಕೊಂಡು ಬಂದಿದ್ದ. ಮತ್ತೆ ಜನವರಿ 8ರಂದು ಉಳಿದ ಚಿನ್ನಾಭರಣಗಳನ್ನು...