Bangalore, ಏಪ್ರಿಲ್ 10 -- Bangalore News: ಬೆಂಗಳೂರಿನ ಪ್ರಸಿದ್ದ ಲಾಲ್‌ ಬಾಗ್‌ ನ ಕೆರೆಯಲ್ಲಿ ತೇಲುವ ತೋಟಗಳನ್ನುಪರಿಚಯಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಈ ಮೂಲಕ 30 ಎಕರೆಯಲ್ಲಿ ಹರಡಿರುವ ಕೆರೆ ಮತ್ತು ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ 22 ತೇಲುವ ತೋಟಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ 1 ತಿಂಗಳಲ್ಲಿ ತೇಲುವ ತೋಟಗಳು ಕೆರೆಯಲ್ಲಿ ತೇಲಲಿವೆ. ಈ ತೇಲುವ ತೋಟಗಳಲ್ಲಿ ಸಸ್ಯಗಳನ್ನು ನೆಟ್ಟು ಕೆರೆಗೆ ಬಿಡಲಾಗುತ್ತದೆ, 12*15 ಮತ್ತು 6*4 ಅಳತೆಯಲ್ಲಿ ತೇಲುವ ತೋಟಗಳನ್ನು ನಿರ್ಮಿಸಿ ಕನ್ನಾ ಇಂಡಿಕಾ ಗಿಡಗಳನ್ನು ನೆಡಲಾಗುತ್ತದೆ.

ಕನ್ನಾ ಇಂಡಿಕಾ ಸಸ್ಯಗಳೇ ಏಕೆ ಎಂದರೆ ಈ ಸಸ್ಯಗಳು ಜಲ ಸ್ನೇಹಿ ಮತ್ತು ಸುಲಭದ ಬೆಲೆಗೆ ಲಭ್ಯವಾಗುತ್ತವೆ. ಒಮ್ಮೆ ನೀರಿನೊಳಗೆ ಬೇರುಗಳು ಇಳಿದರೆ ಸಸ್ಯಗಳೇ ನೀರಿನಿಂದ ನೇರವಾಗಿ ತಮಗೆ ಬೇಕಾದ ಪೌಷ್ಠಿಕಾಂಶಗಳನ್ನ...