ಭಾರತ, ಫೆಬ್ರವರಿ 6 -- Bangalore Fire Accident: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸುಟ್ಟು ಹೋಗಿರುವ ಘಟನೆ ನಡೆದಿದೆ.ಮಾಗಡಿ ರಸ್ತೆಯ ಸೀಗೆಹಳ್ಳಿ ಎನ್ನುವ ಬಡಾವಣೆಯಲ್ಲಿ ಕಟ್ಟಡದ ಕೆಲಸ ನಡೆಯುವಾಗ ಏಕಾಏಕಿ ಸಿಲೆಂಡರ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಸಿಲೆಂಡರ್‌ ಸ್ಪೋಟಿಸಿ ಕಟ್ಟಡದ ಒಳಗೆ ಸಂಗ್ರಹಿಸಿಡಲಾಗಿದ್ದ ಮರದ ವಸ್ತುಗಳಿಗೆ ಕಿಡಿಹೊತ್ತಿದ್ದರಿಂದ ಬೆಂಕಿಯ ಜ್ವಾಲೆ ಅಧಿಕವಾಗಿದೆ. ಈ ವೇಳೆ ಉತ್ತರ ಪ್ರದೇಶ ಮೂಲದ ಉದಯಭಾನು ಹಾಗೂ ಬಿಹಾರ ರಾಜ್ಯದ ರೋಷನ್‌ ಎಂಬ ಇಬ್ಬರು ತಪ್ಪಿಸಿಕೊಳ್ಳಲು ಆಗದೇ ಬೆಂಕಿಗೆ ಆಹುತಿಯಾಗಿದ್ದಾರೆ. ಇನ್ನೂ ಮೂವರು ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. ರಕ್ಷಿಸಿಕೊಳ್ಳಲು ನೀರಿನ ಟ್ಯಾಂಕ್‌ ಏರಿದ್ದ ಇನ್ನೊಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ.

Published by HT Digital Content Services with permission from HT Kannada....