Bangalore, ಮಾರ್ಚ್ 2 -- Bangalore News: ಮೊದಲೆಲ್ಲಾ ಮಕ್ಕಳನ್ನು ಆಡಿ ಬಾ ನನ ಕಂದ ಅಂಗಾಲು ತೊಳೆದೇನಾ ಎಂದು ಪೋಷಕರು ಹಾಡುತ್ತಿದ್ದಾರೆ. ಮಕ್ಕಳಿಗೂ ಆಟದ ಸ್ವಾತಂತ್ರ್ಯವೂ ಇತ್ತು. ಆಟ ಹಾಗೂ ಪಾಠದ ಸಮನ್ವಯ ಚೆನ್ನಾಗಿಯೇ ಇತ್ತು. ಮಕ್ಕಳು ಕೆಡುವ ಅವಕಾಶ ಕಡಿಮೆಯೇ ಇತ್ತು. ಕಾಲ ಬದಲಾಗಿದೆ. ಮಕ್ಕಳ ಆಟಕ್ಕೆ ಹಲವು ಮಾರ್ಗಗಳಿದ್ದರೂ ಅವು ಮಕ್ಕಳನ್ನು ಅಡ್ಡದಾರಿಗೆ ಎಳೆಯುವ ಹಂತಕ್ಕೂ ಬೆಳೆದಿವೆ. ಸ್ವಾತಂತ್ರ್ಯಕ್ಕಿಂತ ಸ್ವೇಚ್ಛಾಚಾರವೂ ಹೆಚ್ಚಿ ಮಕ್ಕಳು ದಾರಿ ತಪ್ಪುವ ಸನ್ನಿವೇಶ ಸೃಷ್ಟಿಯಾಗುತ್ತಿವೆ. ಇದಕ್ಕಾಗಿಯೇ ಬೆಂಗಳೂರಿನಂತಹ ನಗರದಲ್ಲಿ ತಮ್ಮ ಮಕ್ಕಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಖಾಸಗಿ ಪತ್ತೆದಾರಿಗಳನ್ನು ನೇಮಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಮಕ್ಕಳು ಏನೆಲ್ಲಾ ಮಾಡುತ್ತಿರಬಹುದು ಎನ್ನುವ ಅನುಮಾನದ ಕಾರಣಕ್ಕೆ ನಿಖರ ಮಾಹಿತಿ ಪಡೆಯಲು ಪೋಷಕರು ಸಾವಿರಾರು ರೂ.ಗಳನ್ನು ವೆಚ್ಚ ಮಾಡುತ್ತಿದ್ದಾರೆ.

ತಮ್ಮ ಹದಿಹರೆಯದ ಮತ್ತು ಯೌವನದ ಆರಂಭಿಕ ದಿನಗಳಲ್ಲಿ ಮಕ್ಕಳು ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ...