Bangalore, ಜನವರಿ 31 -- ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳೂ ಕನ್ನಡ ಇರುವ ನಾಮಫಲಕ ಬಳಸುವುದನ್ನು ಬೃಹತ್‌ ಬೆಂಗಳೂರು ನಗರಪಾಲಿಕೆ ಕಡ್ಡಾಯ ಮಾಡಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆಗಾಗ ವಿಚಕ್ಷಣೆ ಮಾಡುತ್ತದೆ. ದಿಢೀರ್‌ ದಾಳಿ ಮಾಡಿ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದೆ. ಹೀಗಿದ್ದರೂ ಬೆಂಗಳೂರಿನ ಹಲವು ಕಡೆಗಳಲ್ಲಿ ವ್ಯಾಪಾರಸ್ಥರು ಫಲಕಗಳಲ್ಲಿ ಕನ್ನಡ ಬಳಸದೇ ಇರುವುದು ಕಂಡು ಬಂದಿದೆ. ಅದರಲ್ಲೂ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಇರಲೇಬೇಕು. ಉಳಿಕೆ ಪ್ರಮಾಣದಲ್ಲಿ ಇತರೆ ಭಾಷೆ ಹಾಕಿಕೊಳ್ಳಲು ಅವಕಾಶವಿದೆ. ಆದರೆ ಕನ್ನಡ ಹಾಕದೇ ಇದ್ದರೆ ಫೆಬ್ರವರಿ 1ರಿಂದಲೇ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಸೂಚನೆಗಳನ್ನು ನೀಡಿರುವುದರಿಂದ ಕೆಲವರು ಕನ್ನಡ ಫಲಕ ತಯಾರಿಸಲು ಮುಗಿ ಬೀಳುವುದು ಕಂಡು ಬಂದಿದೆ.

ಬೆಂಗಳೂರಿನಲ್ಲಿ ಕನ್ನಡವನ್ನು ನಾಮಫಲಕಗಳಲ್ಲಿ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸರ್ಕಾರ ಈ ಹಿಂದೆಯೇ ಆದೇಶ ಮಾಡಿದೆ. ಇದಕ್ಕಾಗಿ ಕನ...