Bangalore, ಫೆಬ್ರವರಿ 11 -- ಬೆಂಗಳೂರು: ಆರೇಳು ತಿಂಗಳ ಹಿಂದೆ ಕೆಲವರ ಮೇಲೆ ಹಣಕ್ಕಾಗಿ ದಾಳಿ ಎಸಗಿ ತೀವ್ರ ಹಲ್ಲೆ ಮಾಡಿ ಜೈಲು ಸೇರಿದ್ದ ಬೆಂಗಳೂರಿನ ಯುವಕನೊಬ್ಬ ಅರ್ಧಗಂಟೆಯ ಅಂತರದಲ್ಲೇ ನಾಲ್ವರ ಮೇಲೆ ಚಾಕುವಿನಿಂದ ದಾಳಿ ಗಾಯಗೊಳಿಸಿದ್ದಾನೆ. ಅಲ್ಲದೇ ಯುವಕನೊಬ್ಬನ ಮೇಲೆ ದಾಳಿ ಮಾಡಿ ಅತನ ಸ್ಕೂಟರ್‌ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಇಂದಿರಾನಗರದ ಕದಂಬ ಎಂಬಾತ ಇಂತಹ ಕೃತ್ಯ ಎಸಗಿರುವುದು ಕಂಡು ಬಂದಿದ್ದು. ಆತನ ಸೆರೆಗೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಆರೋಪಿ ಹೊಸಕೋಟೆ ಮಾರ್ಗದಲ್ಲಿ ಹೋಗಿರುವ ಮಾಹಿತಿ ಆಧರಿಸಿ ಈಗಾಗಲೇ ಪೊಲೀಸ್‌ ತಂಡಗಳು ಕಾರ್ಯಾಚರಣೆ ನಡೆಸಿವೆ. ಆತನನ್ನು ಸದ್ಯದಲ್ಲೇ ಸೆರೆ ಹಿಡಿಯುವುದಾಗಿ ಬೆಂಗಳೂರು ನಗರ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಇಂದಿರಾನಗರದಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ನಾಲ್ವರನ್ನು ಇರಿದು ತೀವ್ರವಾಗಿ ಗಾಯಗೊಳಿಸಿದ್ದ ರೌಡಿಯೊಬ್ಬನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ. ಶನಿವಾರ ರಾತ್ರಿ 9.30 ರಿಂದ 10 ಗಂ...