Bangalore, ಮಾರ್ಚ್ 6 -- Bangalore News:ಬೆಂಗಳೂರು ನಗರದಲ್ಲಿ ಬ್ಲಾಕ್ ಆ್ಯಂಡ್ ವೈಟ್ ದಂಧೆ ಹೆಸರಿನಲ್ಲಿ ಒಂದು ಕೋಟಿ ರೂ. ರೂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್, ಅಂಬರೀಶ್ ಹಾಗೂ ಮಾರ್ಟಿನ್ ಎಂಬುವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಾಪತ್ತೆಯಾಗಿರುವ ಸಚಿನ್, ರವಿ, ವೆಂಕಟೇಶ್ ಎಂಬ ಇತರ ಮೂವರಿಗೆ ಬಲೆ ಬೀಸಿದ್ದಾರೆ. 1 ಕೋಟಿ ರೂ ನಗದು ನೀಡಿದರೆ ಬ್ಯಾಂಕ್ ಖಾತೆಗೆ 1 ಕೋಟಿ ರೂ. ಜತೆಗೆ 20 ಲಕ್ಷ ರೂ. ಸೇರಿಸಿ 1.20 ಕೋಟಿ ಹಣ ನೀಡುವ ಹೊಸ ಜಾಲ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹೆಸರಿನಲ್ಲಿ ಚನ್ನಪಟ್ಟಣ ಮೂಲದ ಜಯಚಂದ್ರ ಎಂಬುವರ ಬಳಿ ಇಂದಿರಾನಗರ ನಿವಾಸಿ ಶ್ರೀನಿವಾಸ್ ಎಂಬಾತ ಇಂತಹುದ್ದೊಂದು ಪ್ರಸ್ತಾವನೆ ತಂದಿದ್ದ. ನಮ್ಮದೇ ಒಂದು ಕಂಪನಿ ಇದೆ. ಅಕೌಂಟ್ ಮೂಲಕ ವಹಿವಾಟು ನಡೆಸಿದರೆ ಹೆಚ್ಚಿನ ಹಣ ತೆರಿಗೆ ರೂಪದಲ್ಲಿ ಕಡಿತವಾಗುತ್ತದೆ. ಆದ್ದರಿಂದ ನಮಗೆ ನಗದು ಹಣ ಬೇಕು. ನಗದು ಕೊಟ್ಟರೆ ನಿಮ್ಮ ಅಕೌಂಟ್ ಗೆ 1.20 ಕೋಟಿ ಹಣ ಜಮಾ ಮಾಡುತ್ತೇವೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.