Bangalore, ಜನವರಿ 29 -- ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹತ್ತು ವರ್ಷದ ಬಳಿಕ ನೀರಿನ ದರ ಏರಿಕೆಯಾಗುವುದು ಖಚಿತವಾಗಿದೆ. ಸತತ ಒಂದು ವರ್ಷದಿಂದ ದರ ಏರಿಕೆ ಕುರಿತು ಚರ್ಚೆ ನಡೆಸುತ್ತಲೇ ಬರುತ್ತಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ (BWSSB) ಈ ಬಾರಿ ಅನಿವಾರ್ಯವಾಗಿ ದರ ಹೆಚ್ಚಳ ಮಾಡಲು ಮುಂದಾಗಿದೆ. ಏರುತ್ತಿರುವ ವೆಚ್ಚಗಳು, ನಷ್ಟದ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಜಲಮಂಡಳಿ ದರ ಏರಿಕೆ ಮಾಡುವತ್ತ ಹೆಜ್ಜೆ ಇಟ್ಟಿದೆ. ಈ ಸಂಬಂಧ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಲಮಂಡಳಿಯಿಂದ ದರ ಏರಿಕೆಗೆ ಸಂಬಂಧಿಸಿದಂತೆ ವರದಿಯನ್ನು ಕೇಳಿದ್ದಾರೆ. ವರದಿ ಆಧರಿಸಿ ಕರ್ನಾಟಕ ಸರ್ಕಾರವು ದರ ಏರಿಕೆ ಮಾಡಲಿದೆ.ಎಷ್ಟು ಪ್ರಮಾಣ ಎನ್ನುವುದು ಒಂದೆರಡು ದಿನದಲ್ಲಿ ಅಂತಿಮವಾಗಬಹುದು.

Published by HT Digital Content Services with permission from HT Kannada....