Bangalore, ಮಾರ್ಚ್ 17 -- Bangalore News: ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ 23 ವರ್ಷದ ದಿನಗೂಲಿ ಕಾರ್ಮಿಕನೊಬ್ಬ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದ್ದು. ಆತನನ್ನು ಬಂಧಿಸಲಾಗಿದೆ. ಅಸಹಜವಾಗಿ ನಡೆದುಕೊಂಡು ಮಾಹಿತಿ ತಿಳಿದ ನಂತರ ದೂರು ಆಧರಿಸಿ ಬೆಂಗಳೂರು ಜಯನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಪ್ರಾಣಿ ಪೋಷಕರೊಬ್ಬರು ಈ ಕೃತ್ಯಕ್ಕೆ ಸಾಕ್ಷಿಯಾಗಿದ್ದು, ವೀಡಿಯೊ ಪುರಾವೆಗಳನ್ನು ರೆಕಾರ್ಡ್ ಮಾಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

ಗಾಯಗೊಂಡ ನಾಯಿಯನ್ನು ರಕ್ಷಿಸಲಾಗಿದೆ. ನಾಯಿಗೆ ವೈದ್ಯಕೀಯ ಆರೈಕೆ ನೀಡಲಾಗಿದ್ದು, ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಹಾರದ ದಿನಗೂಲಿ ಕಾರ್ಮಿಕನಾಗಿರುವ ಆರೋಪಿ, ನಾಯಿಯ ಖಾಸಗಿ ಭಾಗಗಳನ್ನು ವಿರೂಪಗೊಳಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ದೂರುದಾರರ ಹೇಳಿಕೆಯ ಪ್ರಕಾರ, ಬೀದಿ ನಾಯಿಗಳ...