Bangalore, ಮಾರ್ಚ್ 30 -- Bangalore News:ಈಗಾಗಲೇ ಸತತ ಒಂದೆರಡು ತಿಂಗಳಿನಿಂದ ಕರ್ನಾಟಕದಲ್ಲಿ ದರ ದುಬಾರಿಯದ್ದೇ ಸದ್ದು. ಹಾಲು, ಮೊಸರು, ವಿದ್ಯುತ್‌, ಬಸ್‌ ಪ್ರಯಾಣ, ಮೆಟ್ರೋ, ನೋಂದಣಿ ಸಹಿತ ನಾನಾ ದರಗಳು ಏರಿಕೆಯಾಗಿವೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ದರ ಏರಿಕೆ ಸರದಿ. ಬೆಂಗಳೂರು ಮಹಾನಗರದಲ್ಲಿ ನೀರಿನ ದರ ಏರಿಕೆಗೆ ತಯಾರಿ ಮಾಡಿಕೊಂಡಿರುವ ನಡುವೆ ಘನತ್ಯಾಜ್ಯದ ನಿರ್ವಹಣೆಗೆ ಸಂಬಂಧಿಸಿ ಹೊಸ ರೀತಿಯ ಶುಲ್ಕ ವಿಧಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೇಳಿಕೆ. ಈ ಕುರಿತು ಚರ್ಚೆಗಳು ನಡೆದಿದ್ದವಾದರೂ ಹೊಸ ಶುಲ್ಕದ ವಿಷಯವನ್ನು ಶನಿವಾರ ಮಂಡಿಸಿದ ಬಿಬಿಎಂಪಿ ವಾರ್ಷಿಕ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆ ಸೇವೆಗಳಿಗೆ ಹೊಸ ಬಳಕೆದಾರ ಶುಲ್ಕವನ್ನು ಘೋಷಿಸಿದ್ದು, ಇದು 2025ರ ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಹೊಸ ಶುಲ್ಕವು ನಗರದ ಎಲ್ಲಾ ತ್ಯಾಜ್ಯ ಉತ್ಪಾದಕರಿಗೆ ಅನ್ವಯಿಸಲಿದೆ. ಆಸ್ತಿಯ ಗ...