Bangalore, ಮಾರ್ಚ್ 22 -- Bangalore News: ಬೆಂಗಳೂರಿನ ಆರ್ ಎಂಸಿ ಯಾರ್ಡ್ ಮತ್ತು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿ ಒಟ್ಟು 45.73 ಲಕ್ಷ ರೂ. ಬೆಲೆಯ 80 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕೇರಳ, ತಮಿಳುನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನಾಲ್ವರು ಮತ್ತು ಓರ್ವ ಹಳೆಯ ಕಳ್ಳನನ್ನು ಬಂಧಿಸಲಾಗಿದೆ. ಆರ್ಎಂಸಿಯಾರ್ಡ್, ಮಲ್ಲೇಶ್ವರಂನ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ದಂಪತಿ ತರಕಾರಿ ತೆಗೆದುಕೊಳ್ಳಲು ಯಶವಂತಪುರ ಮಾರ್ಕೆಟ್‌ಗೆ ಹೋಗಿದ್ದಾಗ ಐ ಫೋನ್‌ ಕಳುವಾಗಿದೆ ಎಂದು ಆರ್‌ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ಲಾಟಿನಂ ಸಿಟಿ ಅಪಾರ್ಟಮೆಂಟ್ ರಸ್ತೆಯಲ್ಲಿ ಇಬ್ಬರನ್ನು ಐದು ಮೊಬೈಲ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.

ಇಬ್ಬರನ್ನೂ ವಿಚಾರಣೆ ನಡೆಸಿದಾಗ ಮೊಬೈಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ಇವರ ಮೂವರು ಸಹಚರರು ಭದ್ರಾವತಿಯಲ್ಲಿ ಮೊಬೈಲ್ ಫ...