Bangalore, ಫೆಬ್ರವರಿ 2 -- Bangalore News: ಬೆಂಗಳೂರು: ಹಲವಾರು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಪಾವತಿಸದೇ ವಿಳಂಬ ಧೋರಣೆ ಅನುಸರಿಸುತ್ತಿದ್ದ ಬೆಂಗಳೂರಿನ ತೆರಿಗೆ ಬಾಕಿದಾರರ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬ್ರಹ್ಮಾಸ್ತ್ರ ಬೀರಿದೆ. ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಹರಾಜು ಹಾಕುವುದಾಗಿ ಬಿಬಿಎಂಪಿ ಒಂದು ವರ್ಷದಿಂದ ಹೇಳುತ್ತಲೇ ಬರುತಿತ್ತು. ಇಷ್ಟಾದರೂ ಬಾಕಿ ಪಾವತಿಸದೇ ಇರುವುದರಿಂದ ಕೊನೆಗೆ ಆಸ್ತಿ ಹರಾಜಿನಂತ ಪ್ರಕ್ರಿಯೆ ಕೈ ಹಾಕಿದೆ. ಫೆಬ್ರವರಿ ಮೊದಲ ವಾರದಲ್ಲಿ ಪ್ರಕ್ರಿಯೆ ಶುರುವಾಗಲಿದ್ದು, ಅತಿ ಹೆಚ್ಚು ಆಸ್ತಿ ಉಳಿಸಿಕೊಂಡಿರುವ 608 ಆಸ್ತಿಗಳ ಹರಾಜನ್ನು ಹಾಕಲಾಗುತ್ತದೆ. ಇವರೆಲ್ಲೂ ಈವರೆಗೂ ತಲಾ 20 ಕೋಟಿ ರೂ.ಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು. ಇದಾದ ನಂತರ ಉಳಿಕೆ ಆಸ್ತಿಗಳ ಹರಾಜು ಪ್ರಕ್ರಿಯೆಯೂ ಶುರುವಾಗಲಿದೆ.

ಬಿಬಿಎಂಪಿಗೆ ಆಸ್ತಿ ಉಳಿಸಿಕೊಂಡಿರುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಹಲವಾರು ಕಠಿಣ ಕ್ರಮಗಳ ನಡುವೆಯೇ ಹಲವರು ನಾನಾ ಕಾರಣ ನೀಡಿ ತೆರಿ...