ಭಾರತ, ಮಾರ್ಚ್ 2 -- ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಿಂದ ಅಬುದಾಭಿಗೆ ಮೊದಲ ಅಂತಾರಾಷ್ಟ್ರೀಯ ವಿಮಾನವನ್ನು ಆಕಾಸ ಏರ್‌ ಪರಿಚಯಿಸಿದ್ದು, ಮಾರ್ಚ್‌1ರಿಂದ ಹಾರಾಟ ಪ್ರಾರಂಭಿಸಿದೆ. ಬೆಂಗಳೂರು ಮತ್ತು ಅಹ್ಮದಾಬಾದ್‌ನನ್ನು ಸಂಪರ್ಕಿಸಲು ಅಬುದಾಭಿಗೆ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು, ಅಬುಧಾಬಿಯ ಜಾಯೆದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12.35 ಗಂಟೆಗೆ ತಲುಪಲಿದೆ. ಅದೇ ರೀತಿ ಅಹಮದಾಬಾದ್‌ನಿಂದ ಮೊದಲ ವಿಮಾನವು ಅಬುಧಾಬಿಯ ಜಾಯೆದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 03:00 ಗಂಟೆಗೆ ಹೊರಟು 08:45ಕ್ಕೆ ಬೆಂಗಳೂರು ತಲುಪಲಿದೆ.

2024 ರ ಜುಲೈ ತಿಂಗಳಿನಿಂದ ಮುಂಬೈ ಮತ್ತು ಅಬುಧಾಬಿ ನಡುವಿನ ದೈನಂದಿನ ವಿಮಾನ ಸೇವೆಯ ಹೊಸ ಮಾರ್ಗಗಳು ಆರಂಭಗೊಂಡಿತು. ಇದೀಗ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ಸೇವೆ ಪ್ರಾರಂಭಿಸಲಾಗಿದ್ದು, ಈ ಮೂಲಕ ಆಕಾಸ ಏರ್ ಅಬುಧಾಬಿಗೆ ದೇಶದ ಪ್ರಮುಖ ಮೂರು ನಗರಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಇದಕ್ಕಾಗಿ ಒಟ್ಟು 21 ವಿಮಾನಗಳು ಹಾರಾಟ ...